ಕೇಂದ್ರ ಸರ್ಕಾರದ ವಿರುದ್ಧ ಗೌಡರ ಗುಟುರು..!

ರಾಜ್ಯ ಸರ್ಕಾರ ನೀಡಿದ್ದ ಪ್ರವಾಹ ವರದಿಯನ್ನು ತಿರಸ್ಕರಿಸಿರುವ ಕೇಂದ್ರಸರ್ಕಾರದ ವಿರುದ್ಧ ದೊಡ್ಡಗೌಡ್ರು ಗುಡುಗಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರವಾಹ ವರದಿಯನ್ನು ಸರಿ ಇಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದ್ದು ಇದೇ ಮೊದಲು. ರಾಜ್ಯ ಸರ್ಕಾರದ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ಕೇಳಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಪ್ರವಾಹ ಬಂದು ಜನ ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿ ಕನಿಷ್ಠ ಒಂದು ವಾರ ವಿಧಾನಸಭೆ ಅಧಿವೇಶನ ನಡೆಸಿ ಚರ್ಚೆ ನಡೆಸಬೇಕಿತ್ತು. ಆದ್ರೆ ಇವರ 3 ದಿನ ಅಧಿವೇಶನ ನಡೆಸಲು ನಿರ್ಧರಿಸಿದ್ದಾರೆ. ಇದು ಸರಿಯಲ್ಲ ಅಂದ್ರು. ನೆರೆ ಪರಿಹಾರದ ಬಗ್ಗೆ ನಾನು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಆದ್ರೂ ಕೇಂದ್ರ ಸ್ಪಂದಿಸಿಲ್ಲ. ವಿಧಾನಸಭೆ ಅಧಿವೇಶನದ ದಿನ ಅಂದ್ರೆ ಅಕ್ಟೋಬರ್ 10ರಂದು ಪಾದಯಾತ್ರೆ ನಡೆಸಿ ಮೌನ ಪ್ರತಿಭಟನೆ ನಡೆಸುತ್ತೇನೆ ಎಂದು ಘೋಷಿಸಿದ್ರು.

Contact Us for Advertisement

Leave a Reply