ಕಳೆದ ವರ್ಷದ ಪರಿಹಾರ ಈಗ ಕೊಟ್ಟಿದ್ದಾರೆ: ದೇವೇಗೌಡರ ಗುಡುಗು

ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿರೋದು ಈ ಬಾರಿಯ ಪ್ರವಾಹಕ್ಕಲ್ಲ. ಕಳೆದ ವರ್ಷದ ಪ್ರವಾಹಕ್ಕೆ ಎಂದು ಮಾಜಿ ಪ್ರಧಾನಿ ದೇವೇಗೌಡ ಬಾಂಬ್ ಹಾಕಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹ ಬಂದಿತ್ತು. ಆಗ ಕೇಂದ್ರ ಸರ್ಕಾರದ ಬಳಿ ಒಟ್ಟು 3800 ರೂಪಾಯಿ ಪರಿಹಾರ ಕೇಳಿದ್ದರು. ಈಗ ಅದರಲ್ಲಿ 1,011 ರೂಪಾಯಿ ಪರಿಹಾರ ನೀಡಿದ್ದಾರೆ ಅಂದಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಕಳುಹಿಸಿರುವ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಈಗ ಪರಿಹಾರ ನೀಡಿರೋದು ಕಳೆದ ವರ್ಷ ಕೊಡಗಿನಲ್ಲಾದ ಪ್ರವಾಹಕ್ಕೆ ಎಂದಿದ್ದಾರೆ.

Contact Us for Advertisement

Leave a Reply