ಚೀನಾದಿಂದ ಹೊಸ ಅಸ್ತ್ರ ಪ್ರದರ್ಶನ..! ಅಮೆರಿಕಾಗೆ ಟಕ್ಕರ್…

ಚೀನಾ 70ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಹತ್ವದ ಮಿಸೈಲ್ ಒಂದನ್ನು ಲಾಂಚ್ ಮಾಡಿದೆ. ಇದು ಕೇವಲ 30 ನಿಮಿಷಗಳಲ್ಲಿ ಅಮೆರಿಕಾದ ಯಾವುದೇ ನಗರವನ್ನು ಚೀನಾ ಟಾರ್ಗೆಟ್ ಮಾಡುವ ಸಾಮಥ್ರ್ಯ ಹೊಂದಿದೆ. ಸ್ವಾತಂತ್ರ್ಯದ ಸಂಭ್ರಮದ ವೇಳೆ ಈ ಅತ್ಯಾಧುನಿಕ ಡಿಎಫ್-41 ಕ್ಷಿಪಣಿಯನ್ನು ಲಾಂಚ್ ಮಾಡಿದೆ. ಈ ಮೂಲಕ ಅಮೆರಿಕಾಗೆ ತನ್ನ ತಾಕತ್ತನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದೆ. ಈಗಾಗಲೇ ಅಮೆರಿಕಾ ಮತ್ತು ಚೀನಾ ನಡುವೆ ವ್ಯಾಪಾರದ ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ. ಈ ಮಿಸೈಲ್ ಲಾಂಚ್ ಬಳಿಕ ಈ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸುವ ಸಾಧ್ಯತೆ ಇದೆ. ಚೀನಾದ ಈ ಆಧುನಿಕ ಮಿಸೈಲ್ 15 ಸಾವಿರ ಕಿಲೋಮೀಟರ್ ದೂರದಲ್ಲಿರೋ ಟಾರ್ಗೆಟ್‍ನ್ನು ಹೊಡೆದುರುಳಿಸೋ ಸಾಮಥ್ರ್ಯ ಹೊಂದಿದೆ. ಅತೀ ದೂರ ಸಾಗಿ ಟಾರ್ಗೆಟ್ ಉಡೀಸ್ ಮಾಡೋ ಏಕೈಕ ಮಿಸೈಲ್ ಇದಾಗಿದೆ ಅಂತ ಚೀನಾ ಮೂಲಗಳು ತಿಳಿಸಿವೆ.

Contact Us for Advertisement

Leave a Reply