masthmagaa.com:

ಫುಟ್ಬಾಲ್‌ ದಂತಕಥೆ ಅರ್ಜೆಂಟೀನಾದ ಡಿಯಾಗೋ ಮರಡೋನಾ (60) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಎರಡು ವಾರಗಳ ಹಿಂದಷ್ಟೇ ಅವರು ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮರಡೋನಾ ಅಗಲಿಕೆಗೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ. ಬ್ರೆಜಿಲ್‌ ಫುಟ್ಬಾಲ್​ ಲೆಜೆಂಡ್​ ಪೀಲೆ, ʻನನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಪ್ರಪಂಚ ಒಂದು ದಂತಕಥೆಯನ್ನ ಕಳೆದುಕೊಂಡಿದೆ. ಮುಂದೊಂದು ದಿನ ನಾವಿಬ್ಬರು ಆಕಾಶದಲ್ಲಿ ಫುಟ್ಬಾಲ್ ಆಡೋಣʼ ಅಂತ ಟ್ವೀಟ್‌ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿ, ʻನನ್ನ ಹೀರೋ ಇನ್ನಿಲ್ಲʼ ಅಂತ ಬರೆದುಕೊಂಡಿದ್ದಾರೆ. ಉಳಿದಂತೆ ಸಚಿನ್ ತೆಂಡೂಲ್ಕರ್, ಲಿಯೋನಲ್ ಮೆಸ್ಸಿ, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply