ಸೌದಿಯ ಭಯಾನಕ ಕಾನೂನುಗಳ ಬಗ್ಗೆ ನಿಮಗೆ ಗೊತ್ತಾ..?

ಹಾಯ್ ಫ್ರೆಂಡ್ಸ್, ಸಂಪ್ರದಾಯವಾದಿ ದೇಶ ಸೌದಿ ಅರೇಬಿಯಾದಲ್ಲಿ ಪುರುಷರಂತೆ ಮಹಿಳೆಯರಿಗೆ ಸಮಾನ ಹಕ್ಕುಗಳಿಲ್ಲ. ಈ ದೇಶದಲ್ಲಿ ಷರಿಯಾ ಕಾನೂನುಗಳನ್ನ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತೆ. ಎಷ್ಟರಮಟ್ಟಿಗೆ ಅಂದ್ರೆ ಮಹಿಳೆಯರು ತಾವು ಹಾಕಿಕೊಳ್ಳುವ ಡ್ರೆಸ್ ನಿಂದ ಹಿಡಿದು ತಮ್ಮ ಗಂಡನನ್ನ ಆಯ್ಕೆ ಮಾಡಿಕೊಳ್ಳಲು ಕೂಡ ಸ್ವಾತಂತ್ರ್ಯವಿಲ್ಲ. ಇಂಥ ಕಟ್ಟುಪಾಡುಗಳನ್ನ ಮೀರಿದರೆ ಕಠಿಣವಾಗಿ ಶಿಕ್ಷೆ ಎದುರಿಸಬೇಕಾಗುತ್ತೇ. ಹೀಗಾಗೆ ಯಾವುದೇ ಮಹಿಳೆ ಅದನ್ನ ಮೀರಲು ಧೈರ್ಯ ಮಾಡುವುದಿಲ್ಲ. ಹಾಗಿದ್ರೆ ಸೌದಿ ಅರೇಬಿಯಾದಲ್ಲಿರುವ ಚಿತ್ರ-ವಿಚಿತ್ರ ಕಾನೂನುಗಳನ್ನ ನೋಡ್ತಾ ಹೋಗೋಣ.

ಸೌದಿ ಹೆಣ್ಮಕ್ಕಳು ತಮ್ಮ ಸೌಂದರ್ಯ ಪ್ರದರ್ಶಿಸುವಂತಿಲ್ಲ
ಫ್ರೆಂಡ್ಸ್ ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಕೆಲವೊಂದು ಡ್ರೆಸ್ಕೋಡ್ ವಿಧಿಸಲಾಗಿದೆ. ಅದನ್ನ ಮೀರಿ ಅವರು ತಮಗಿಷ್ಟಬಂದಂತೆ ಬಟ್ಟೆಯನ್ನ ಧರಿಸುವಂತಿಲ್ಲ. ಸಾಮಾನ್ಯವಾಗಿ ಮಹಿಳೆಯರು ಕಪ್ಪುಬಣ್ಣದ ಬುರ್ಕಾ ಅಥವಾ ನಿಲುವಂಗಿಯನ್ನ ತೊಡುತ್ತಾರೆ. ಇವುಗಳನ್ನ ಅಬಯ ಅನ್ನುತ್ತಾರೆ. ಇದ್ರ ಜೊತೆಗೆ ತಲೆಮೇಲೆ ಸ್ಕಾರ್ಫ್ ಧರಿಸಲಾಗುತ್ತೇ. ಎದುರಿಗೆ ಬಂದವರು ಮಹಿಳೆಯ ಎರಡು ಕಣ್ಣುಗಳನ್ನ ನೋಡುವಷ್ಟು ಮಾತ್ರ ಜಾಗವನ್ನ ಓಪನ್ ಬಿಡಲಾಗುತ್ತೆ. ಅಲ್ಲದೆ ಮಹಿಳೆಯರು ಅತಿಯಾಗಿ ಮೇಕಪ್ ಮಾಡಿಕೊಳ್ಳುವಂತಿಲ್ಲ. ಮಹಿಳೆಯರು ತಮ್ಮ ಸೌಂದರ್ಯವನ್ನ ಪ್ರದರ್ಶಿಸಿದರೆ ಶೋಷಣೆಗೆ ಒಳಗಾಗುತ್ತಾರೆ ಎಂಬ ನಂಬಿಕೆ ಪುರುಷರದ್ದು.

ಸೌದಿ ಹೆಣ್ಮಕ್ಕಳು ಅನ್ಯ ಪುರುಷರ ಜೊತೆ ಮಾತನಾಡುವಂತಿಲ್ಲ
ಹೌದು ಫ್ರೆಂಡ್ಸ್ ಮಹಿಳೆಯರು ಅಪ್ಪಿತಪ್ಪಿಯೂ ಅಪರಿಚಿತ ಹಾಗೂ ಅನ್ಯ ಪುರುಷರ ಜೊತೆ ಮಾತನಾಡುವಂತಿಲ್ಲ. ಹೀಗಾಗೆ ಬಹುತೇಕ ಸರ್ಕಾರಿ ಕಚೇರಿಗಳು, ಬ್ಯಾಂಕ್, ಯುನಿವರ್ಸಿಟಿ ಮುಂತಾದ ಕಡೆಗಳಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನದ ವ್ಯವಸ್ಥೆ ಮಾಡಲಾಗಿರುತ್ತೇ. ಅಷ್ಟೇ ಯಾಕೆ ಸಾರ್ವಜನಿಕ ಸಾರಿಗೆ, ಪಾರ್ಕ್, ಬೀಚ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯು ಅನ್ಯ ಪುರುಷರೊಂದಿಗೆ ಓಡಾಡೋದು ಹಾಗೂ ಮಾತನಾಡುವುದನ್ನು ನಿಬರ್ಂಧಿಸಲಾಗಿದೆ. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೇ. ಅದರಲ್ಲೂ ಮಹಿಳೆಯೇ ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತೆ.

ಹೆಣ್ಣು ಕ್ರೀಡೆಯಲ್ಲಿ ಸ್ವತಂತ್ರವಾಗಿ ಪಾಲ್ಗೊಳ್ಳುವಂತಿಲ್ಲ
ಹೌದು ಫ್ರೆಂಡ್ಸ್ ಕ್ರೀಡೆಯಲ್ಲಿ ಸ್ವತಂತ್ರವಾಗಿ ಪಾಲ್ಗೊಳ್ಳಲು ಮಹಿಳೆಯರಿಗೆ ಸೌದಿಯಲ್ಲಿ ಅಧಿಕಾರವಿಲ್ಲ. ಎಷ್ಟರಮಟ್ಟಿಗೆ ಅಂದ್ರೆ 2012ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾ ತನ್ನ ಮಹಿಳಾ ಅಥ್ಲೀಟ್ ಗಳನ್ನ ಒಲಂಪಿಕ್ಸ್ ಗೆ ಕಳಿಸಿತ್ತು. ಇದನ್ನು ವಿರೋಧಿಸಿದ ಒಂದು ವರ್ಗ ಮಹಿಳಾ ಅಥ್ಲೀಟ್ ಗಳನ್ನ ವೇಶ್ಯೆಯರು ಅಂತ ಟೀಕಿಸಿತ್ತು. ಅದಾದ ಬಳಿಕ 2015 ರಲ್ಲಿ ಮಹಿಳೆಯರನ್ನ ಹೊರತುಪಡಿಸಿದ ಒಲಂಪಿಕ್ಸ್ ಆಯೋಜಿಸಲು ಸೌದಿ ಅರೇಬಿಯಾ ಮುಂದೆ ಬಂದಿತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಇವೆಲ್ಲದರ ನಡುವೆ ಸೌದಿ ಅರೇಬಿಯಾ ನ್ಯಾಷನಲ್ ಸ್ಟೇಡಿಯಂ ಪ್ರವೇಶಿಸಲು 2017ರಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಅವಕಾಶ ನೀಡಲಾಯಿತು.

ಹೆಣ್ಮಕ್ಕಳು ಮಾಲ್‍ನಲ್ಲಿ ಡ್ರೆಸ್ಸಿಂಗ್ ರೂಮ್ ಬಳಸುವಂತಿಲ್ಲ
ಹೌದು ಫ್ರೆಂಡ್ಸ್, ಮಾಲ್ ಗ್ಗಳಲ್ಲಿ ಮಹಿಳೆಯರು ಬಟ್ಟೆ ಖರೀದಿಸಲು ಹೋದ್ರೆ ಅಲ್ಲಿನ ಡ್ರೆಸ್ಸಿಂಗ್ ರೂಮ್ ಗಳನ್ನ ಬಳಸಲು ಅವಕಾಶ ವಿಲ್ಲ. ಇಂತಹ ಡ್ರೆಸ್ಸಿಂಗ್ ರೂಮ್ ಗಳು ಕೇವಲ ಪುರುಷರಿಗೆ ಸೀಮಿತವಾಗಿರುತ್ತೆ. ಇದರ ಜೊತೆಗೆ ಸೆನ್ಸಾರ್ ಮಾಡದ ಫ್ಯಾಶನ್ ಮ್ಯಾಗಜೈನ್ ಗಳನ್ನು ಓದಲು ಮಹಿಳೆಯರಿಗೆ ಅವಕಾಶವಿಲ್ಲ.

ಹೆಣ್ಣು ಸಾರ್ವಜನಿಕ ಈಜುಕೊಳ ಬಳಸುವಂತಿಲ್ಲ
ಫ್ರೆಂಡ್ಸ್, ಸೌದಿ ಅರೇಬಿಯಾದಲ್ಲಿ ಮಹಿಳೆಯರು ಸಾರ್ವಜನಿಕ ಈಜು ಕೊಳವನ್ನ ಬಳಸಲು ಅವಕಾಶವಿಲ್ಲ. ಆದ್ರೆ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವ ಈಜುಕೊಳ, ಜಿಮ್ ಹಾಗೂ ಸ್ಪಾ ಗಳನ್ನು ಬಳಸಬಹುದು.
ಇದಕ್ಕೂ ಮೊದಲಿತ್ತು ಇನ್ನೂ ಭಯಾನಕ ರೂಲ್ಸ್

ಫ್ರೆಂಡ್ಸ್ ಸೌದಿ ಅರೇಬಿಯಾದಲ್ಲಿ ಈ ಹಿಂದೆ ಮಹಿಳೆಯರಿಗೆ ಮತದಾನದ ಹಕ್ಕಿರಲಿಲ್ಲ. 2015 ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನ ನೀಡಲಾಯಿತು. ಮಹಿಳೆಯರಿಗೆ ಕಾರು ಚಲಾಯಿಸಲು ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವಕಾಶವಿರಲಿಲ್ಲ. 2017 ರಲ್ಲಿ ಅದಕ್ಕೂ ಅವಕಾಶ ಕಲ್ಪಿಸಲಾಯಿತು. ಮಹಿಳೆ ಎಲ್ಲಾದ್ರೂ ಹೋಗಬೇಕು ಅಂದರೆ ಪತಿ, ಗಂಡ, ಮಗ, ಅಣ್ಣ ಅಥವಾ ತಮ್ಮ.. ಹೀಗೆ ಯಾರಾದ್ರೂ ಒಬ್ಬರು ಅವ್ರ ಜೊತೆ ಹೋಗಬೇಕಿತ್ತು. ಆದ್ರೆ 2019 ರಲ್ಲಿ ಆ ನಿಬರ್ಂಧವನ್ನ ಕೂಡ ತೆಗೆದು ಹಾಕಲಾಗಿದೆ. ಹೀಗೆ ದಿನಗಳೆದಂತೆ ಸೌದಿ ಅರೇಬಿಯಾದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳೆಯರಿಗೆ ಒಂದೊಂದೇ ಸ್ವಾತಂತ್ರ್ಯವನ್ನ ನೀಡಲಾಗುತ್ತಿದೆ.

Contact Us for Advertisement

Leave a Reply