ಡಿಜಿಟಲ್‌ ಡಾಲರ್‌ ಪ್ರಾರಂಭಿಸ್ತಾ ಇರೋದು ಯಾಕೆ ಗೊತ್ತಾ?

masthmagaa.com:

ಅಮೆರಿಕದ ಫೆಡರಲ್ ರಿಸರ್ವ್ ಡಾಲರ್ ಅನ್ನ ಡಿಜಿಟಲ್ ರೂಪದಲ್ಲೂ ಬಿಡಗಡೆ ಮಾಡೋಕೆ ಪ್ಲಾನ್ ಮಾಡಿದೆ. ಕ್ರಿಪ್ಟೋಕರೆನ್ಸಿಗಳ ಹಾವಳಿಯ ನಡುವೆಯೇ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳಿಗೆ ಸಂಬಂಧಪಟ್ಟ ಹಾಗೆ ನಿಯಮಗಳನ್ನ ಜಾರಿಗೆ ತರಲು ಮುಂದಾಗಿದೆ. ಇದರಲ್ಲಿ ಡಿಜಿಟಲ್ ಡಾಲರ್ ಲಾಂಚ್ ಕೂಡ ಇರುತ್ತೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಕೇಳಿದಾಗ ಫೆಡರಲ್ ರಿಸರ್ವ್ ಚೇರ್ಮನ್ ಜೆರಮ್ ಪಾವೆಲ್, ಈ ಬಗ್ಗೆ ನಿಧಾನಕ್ಕೆ ಒಂದೊಂದೇ ಹೆಜ್ಜೆ ಇಡಲೇಬೇಕು ಅಂತ ಹೇಳಿದ್ದಾರೆ. ಈ ಮೂಲಕ ಶೀಘ್ರ ಡಿಜಿಟಲ್ ಡಾಲರ್ ಬರಬೋದು ಅನ್ನೋ ಸಂಕೇತ ನೀಡಿದ್ದಾರೆ. ಈ ಬಗ್ಗೆ ಭಾರತದ ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮಾತನಾಡಿ ಹೀಗೇನಾದ್ರೂ ಆದ್ರೆ ದುರ್ಬಲ ದೇಶಗಳ ದುರ್ಬಲ ಕರೆನ್ಸಿಗಳು ನಾಶ ಆಗಿ ಹೋಗಬೋದು. ಎಲ್ಲ ಕಡೆ ಡಾಲರ್ ಆಕ್ರಮಿಸಿಕೊಳ್ಳಬೋದು. ಜನ ಅದನ್ನೇ ಬಳಸಬೋದು ಅಂತ ಹೇಳಿದ್ದಾರೆ. ಈಗ ಬೇರೆ ದೇಶದಲ್ಲಿ ಡಾಲರ್ ವ್ಯವಹಾರ ಮಾಡಬೇಕೆಂದರೆ ಡಾಲರ್ ಫಿಸಿಕಲ್ ರೂಪದಲ್ಲಿ ಇರಬೇಕು. ಅದ್ರ ಡಿಜಿಟಲ್ ಡಾಲರ್ ಬಂದ್ರೆ ಈ ಅಡೆತಡೆ ಇರೋದಿಲ್ಲ, ಇದ್ರಿಂದ ದುರ್ಬಲ ದೇಶಗಳು ತಮ್ಮ ಕರೆನ್ಸಿಯ ಮೌಲ್ಯವನ್ನೇ ಕಳೆದುಕೊಳ್ಳಬೋದು. ಹಾಗೂ ಆ ದೇಶದ ಸೆಂಟ್ರಲ್ ಬ್ಯಾಂಕ್ ಗಳಿಗೆ ದೇಶದ ಆರ್ಥಿಕತೆ ಮೇಲೆ ಕಂಟ್ರೋಲೇ ತಪ್ಪಿ ಹೋಗಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply