ಗೋಡ್ಸೆ ದೇಶಭಕ್ತನಾ..? ಗಾಂಧಿ ಹಂತಕನಾ..?: ಬಿಜೆಪಿಗೆ ದಿಗ್ವಿಜಯ್ ಸವಾಲ್

ನಾಥೂರಾಮ್ ಗೋಡ್ಸೆ ವಿಚಾರವಾಗಿ ಬಿಜೆಪಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಮಾತನಾಡಿದ ಅವರು, ನಾಥುರಾಮ್ ಗೋಡ್ಸೆ ದೇಶಭಕ್ತನಾ ಅಥವಾ ಗಾಂಧೀಜಿಯವರ ಹಂತಕನಾ ಎಂದು ಬಿಜೆಪಿಯವರು ತಿಳಿಸಬೇಕು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ನಾಥುರಾಮ್ ಗೋಡ್ಸೆ ಬಗ್ಗೆ ತಮ್ಮ ಪಕ್ಷದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ. ಅಲ್ಲದೆ ಬಿಜೆಪಿಯ ವಿಚಾರಧಾರೆಗಳು ಮತ್ತು ಗಾಂಧೀಜಿ ತತ್ವಗಳು ತದ್ವಿರುದ್ಧವಾಗಿವೆ. ಆದ್ರೂ ಬಿಜೆಪಿಯವರು ಗಾಂಧೀಜಿಯವರ 150ನೇ ಜಯಂತಿಯ ಅಂಗವಾಗಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಆದ್ರೆ ಅವರು ಮೊದಲು ಗೋಡ್ಸೆ ದೇಶಭಕ್ತನಾ ಅಥವಾ ಹಂತಕನಾ ಅನ್ನೋದನ್ನ ಸ್ಪಷ್ಟಪಡಿಸಲಿ ಎಂದು ಸವಾಲ್ ಎಸೆದಿದ್ದಾರೆ.

Contact Us for Advertisement

Leave a Reply