ಪ್ರವಾಹ ಬಂದಿದ್ದರೂ ಸಿಎಂಗೆ ಅನರ್ಹರ ಚಿಂತೆ..! ದಿನೇಶ್ ಸಿಡಿಮಿಡಿ

ನೆರೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಕಾಂಗ್ರೆಸ್ ಇವತ್ತು ಬೀದಿಗೆ ಇಳಿದಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದೆ. ಇದೇ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಕೇಂದ್ರ ಸರ್ಕಾರ ಸ್ಪಂದಿಸಬೇಕು. ರಾಜ್ಯದಲ್ಲಿ ಪ್ರವಾಹ ಬಂದು ತಿಂಗಳ ಮೇಲಾಗಿದ್ದು, ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಆದ್ರೆ ಕೇಂದ್ರ ಸರ್ಕಾರ ಪರಿಹಾರ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ರಾಜ್ಯ ಸರ್ಕಾರವೂ ಕೇಂದ್ರದಲ್ಲಿರೋ ತಮ್ಮದೇ ಬಿಜೆಪಿ ಸರ್ಕಾರದಿಂದ ಪರಿಹಾರ ಕೇಳಿ ತರುವಲ್ಲಿ ವಿಫಲವಾಗಿದೆ ಅಂದ್ರು. ಅಲ್ಲದೆ ರಾಜ್ಯ ಸರ್ಕಾರ ಪ್ರವಾಹದ ವಿಚಾರವಾಗಿ ಒಂದೇ ಒಂದು ಬಾರಿ ಸರ್ವಪಕ್ಷ ಸಭೆ ನಡೆಸಿಲ್ಲ. ಇಲ್ಲಿ ಜನ ಪ್ರವಾಹಕ್ಕೆ ತುತ್ತಾಗಿ ಪರದಾಡುತ್ತಿದ್ರೆ, ಯಡಿಯೂರಪ್ಪ ಅನರ್ಹ ಶಾಸಕರ ಸಮಸ್ಯೆಗೆ ಸ್ಪಂದಿಸಲು ದೆಹಲಿಗೆ ಹೋಗಿ, ವರಿಷ್ಠರ ಬಳಿ ಮಾತನಾಡುತ್ತಾರೆ ಅಂದ್ರು.

Contact Us for Advertisement

Leave a Reply