ಕೆಕೆಆರ್ ನಾಯಕತ್ವಕ್ಕೆ ದಿನೇಶ್ ಕಾರ್ತಿಕ್ ಗುಡ್​ಬೈ.. ಕಾರಣವೇನು ಗೊತ್ತಾ?

masthmagaa.com:

ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಆರ್​ಸಿಬಿ ನಂತರದ ಅಂದ್ರೆ 4ನೇ ಸ್ಥಾನದಲ್ಲಿದೆ. ಆದ್ರೆ ಇಂತಹ ಕೆಕೆಆರ್ ತಂಡದ ನಾಯಕತ್ವಕ್ಕೆ ಗುಡ್​ಬೈ ಹೇಳಲು ದಿನೇಶ್ ಕಾರ್ತಿಕ್ ಮುಂದಾಗಿದ್ದಾರೆ. ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಇಂತಹ ಸಮಯದಲ್ಲಿ ಕ್ಯಾಪ್ಟನ್ಸಿ ಯಾಕೆ ಬಿಟ್ಟುಕೊಡ್ತಿದ್ದಾರೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ.

ಅಂದ್ಹಾಗೆ ದಿನೇಶ್ ಕಾರ್ತಿಕ್ ನಾಯಕತ್ವದ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಅವರಿಗೆ ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಫೋಕಸ್ ಮಾಡಲು ಆಗುತ್ತಿಲ್ಲ. ತಮ್ಮ ಬ್ಯಾಟ್​​ನಿಂದ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಉದ್ದೇಶದಿಂದ ನಾಯಕತ್ವವನ್ನು ಇಂಗ್ಲೆಂಡ್​ನ ಇಯಾನ್ ಮಾರ್ಗನ್​ಗೆ ಬಿಟ್ಟುಕೊಡಲು ಮುಂದಾಗಿದ್ದಾರೆ ಅಂತ ಕೆಕೆಆರ್ ತಿಳಿಸಿದೆ.

ಇಂಗ್ಲೆಂಡ್​ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಇಯಾನ್​ ಮಾರ್ಗನ್​​ಗೆ ಈಗ ಕೆಕೆಆರ್​ನ ನಾಯಕತ್ವವೂ ಸಿಕ್ಕಿದೆ. ಆದ್ರೆ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲೇ ನಾಯಕತ್ವ ಬದಲಾವಣೆ ಮಾಡಿದ್ದು ತಂಡದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಅನ್ನೋದು ಕುತೂಹಲ ಕೆರಳಿಸಿದೆ. ಯಾಕಂದ್ರೆ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ತಂಡ ಉತ್ತಮ ಪ್ರದರ್ಶನ ನೀಡಿದ್ರೆ ಓಕೆ.. ಆದ್ರೆ 4ನೇ ಸ್ಥಾನದಿಂದ ಕಳಗೆ ಬಂದರೆ ಮಾರ್ಗನ್ ನಾಯಕತ್ವದ ಮೇಲೆ ಪ್ರಶ್ನೆ ಮೂಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

-masthmagaa.com

Contact Us for Advertisement

Leave a Reply