ಪಾಕಿಸ್ಥಾನಕ್ಕೆ ಸೌದಿ ಅರೇಬಿಯದಿಂದ ಅಕ್ಕಿದಾನ!

masthmagaa.com:

ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ರು. ಈ ವೇಳೆ ಸೌದಿ ಪಾಕಿಸ್ತಾನಕ್ಕೆ 19,032 ಬ್ಯಾಗ್ ಅಕ್ಕಿ., ಅಂದರೆ 440 ಟನ್​​​ ಅಕ್ಕಿಯನ್ನು ದಾನವಾಗಿ ನೀಡಿದೆ. ಇದು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಮತ್ತು ಪಂಜಾಬ್ ಪ್ರಾಂತ್ಯದ 9 ಜಿಲ್ಲೆಗಳಲ್ಲಿ 1 ಲಕ್ಷದ 14 ಸಾವಿರ ಜನರಿಗೆ ಹಂಚಿಕೆ ಆಗಬೇಕು ಅನ್ನೋದು ನಮ್ಮ ಗುರಿ ಅಂತ ಕರಾಚಿಯಲ್ಲಿರೋ ಸೌದಿ ರಾಯಭಾರಿ ಕಚೇರಿ ತಿಳಿಸಿದೆ. ಆದ್ರೆ ಈ ವಿಚಾರ ಈಗ ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಪಕ್ಷ ನಾಯಕ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ, ಇಮ್ರಾನ್ ಖಾನ್ ಸೌದಿ ಅರೇಬಿಯಾಗೆ ಹೋಗಿ 19 ಸಾವಿರ ಬ್ಯಾಗ್ ಅಕ್ಕಿ ದಾನವಾಗಿ ಪಡೆದಿದ್ದು ಬಿಟ್ರೆ ಬೇರೇನೂ ಪ್ರಯೋಜನವಾಗಿಲ್ಲ. ಇಮ್ರಾನ್ ಖಾನ್ ಸೌದಿ ಪ್ರವಾಸದ ವೆಚ್ಚಕ್ಕಿಂತ ಕಡಿಮೆ ಮೊತ್ತದ ಅಕ್ಕಿಯನ್ನು ದಾನವಾಗಿ ಪಡೆದಂತಾಗಿದೆ. ಒಂದು ಪರಮಾಣು ಶಕ್ತಿ ಹೊಂದಿರುವ ದೇಶಕ್ಕೆ ಅಕ್ಕಿಯನ್ನು ದಾನವನ್ನಾಗಿ ತರಲು ಇಮ್ರಾನ್ ಖಾನ್ 22 ವರ್ಷಗಳ ಕಾಲ ಕಷ್ಟಪಟ್ಟು ಪ್ರಧಾನಿಯಾಗಿದ್ದಾ ಅಂತ ಪ್ರಶ್ನಿಸಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪಾಕಿಸ್ತಾನದ ಅಮೆರಿಕ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ, ಇತ್ತೀಚಿನ ದಿನಗಳವರೆಗೂ ಅತಿದೊಡ್ಡ ಅಕ್ಕಿ ರಫ್ತು ದೇಶವಾಗಿದ್ದ ಪಾಕಿಸ್ತಾನಕ್ಕೆ 19 ಸಾವಿರ ಬ್ಯಾಗ್ ಅಕ್ಕಿ ದಾನವಾಗಿ ಪಡೆಯೋ ಅಗತ್ಯತೆ ಯಾಕೆ ಬಂತು..? ಅಂತ ಕಿಡಿಕಾರಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರೋ ಇಮ್ರಾನ್ ಖಾನ್ ಸರ್ಕಾರ, ಈ ರೀತಿ ದಾನ ಪಡೀತಾ ಇರೋದು.. ದೇಶದಲ್ಲಿ ಹಂಚಿಕೆ ಮಾಡ್ತಿರೋದು ಇದೇ ಮೊದಲಲ್ಲ.. ಮೊದಲಿನಿಂದಲೂ ನಡೀತಾ ಇದೆ. ಈ ಬಗ್ಗೆ ಕಳೆದ ತಿಂಗಳೇ ನಿರ್ಧಾರ ಮಾಡಲಾಗಿತ್ತು. ಇಮ್ರಾನ್ ಖಾನ್ ಪ್ರವಾಸಕ್ಕೂ ಇದ್ಕೂ ಸಂಬಂಧವಿಲ್ಲ ಅಂತ ಸ್ಪಷ್ಟನೆ ನೀಡಿದೆ.

-masthmagaa.com

Contact Us for Advertisement

Leave a Reply