ಹೈಕೋರ್ಟ್​​ನಲ್ಲೂ ಡಿಕೆಶಿಗೆ ಮುಖಭಂಗ..! ಬಂಡೆದು ಏನ್ ಕಥೆನೋ ಏನೋ…

ಡಿ.ಕೆ.ಶಿವಕುಮಾರ್​​ಗೆ ಸದ್ಯಕ್ಕೆ ರಿಲೀಫ್ ಸಿಗೋ ಯಾವುದೇ ಲಕ್ಷಣ ಕಾಣುತ್ತಿಲ್ಲ. ರೋಸ್ ಅವೆನ್ಯೂ ಕೋರ್ಟ್​​​ನಲ್ಲಿ ಹಿನ್ನಡೆಯಾದ ಬಳಿಕ ಈಗ ದೆಹಲಿ ಹೈಕೋರ್ಟ್​​​ನಲ್ಲೂ ಹಿನ್ನಡೆಯಾಗಿದೆ.  ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿ ಆದೇಶಿಸಿದೆ. ಈ ಮೂಲಕ ಮತ್ತೂ 2 ದಿನ ಡಿಕೆಶಿ ಜೈಲಿನಲ್ಲೇ ಇರೋದು ಪಕ್ಕಾ ಆಗಿದೆ.

ನಿನ್ನೆ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಇವತ್ತಿಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು. ಇವತ್ತು ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಇದು ಬಂಧಿಸುವಂತಹ ಪ್ರಕರಣ ಅಲ್ಲವೇ ಅಲ್ಲ. ಈಗಾಗಲೇ ಡಿಕೆಶಿ ವಿರುದ್ಧದ ಪ್ರಕರಣಗಳಲ್ಲಿ ಐಟಿ ವಿಚಾರಣೆಗೆ ಹೈಕೋರ್ಟ್​ ತಡೆ ನೀಡಿದೆ. ಅವರ ವಿರುದ್ಧ ಸಾಕ್ಷ್ಯ ನಾಶ ಪಡಿಸೋ ಆರೋಪ ಮಾಡಲಾಗ್ತಿದೆ. ಆದ್ರೆ ಇದು ಸಾಕ್ಷ್ಯ ನಾಶಪಡಿಸೋ ಪ್ರಕರಣವೇ ಅಲ್ಲ ಎಂದು ವಾದಿಸಿದ್ದರು.

ಇಂದು ಅವರ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ರೋಸ್ ಅವೆನ್ಯೂ ಕೋರ್ಟ್​​​​ಗೆ ಹಾಜರುಪಡಿಸಲಾಗಿತ್ತು. ಆದ್ರೆ ರೋಸ್ ಅವೆನ್ಯೂ ಕೋರ್ಟ್​ ಕೂಡ ಡಿಕೆಶಿ ನ್ಯಾಯಾಂಗ ಬಂಧನವನ್ನು ಮತ್ತೂ 10 ದಿನಗಳ ಕಾಲ ವಿಸ್ತರಿಸಿತ್ತು.

Contact Us for Advertisement

Leave a Reply