ಹೈಕೋರ್ಟ್​​ನಲ್ಲಾದ್ರೂ ಬಂಡೆ ಡಿಕೆಶಿಗೆ ಸಿಗುತ್ತಾ ಜಾಮೀನು..?

ತಿಹಾರ್ ಜೈಲಿನಲ್ಲಿರುವ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಭವಿಷ್ಯ ಹೈಕೋರ್ಟ್​​​ನಲ್ಲಿಂದು ನಿರ್ಧಾರವಾಗಲಿದೆ. ರೋಸ್ ಅವೆನ್ಯೂ ಕೋರ್ಟ್​​ ಡಿ.ಕೆ.ಶಿವಕುಮಾರ್​​ಗೆ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಜಾಮೀನಿಗಾಗಿ ಹೈಕೋರ್ಟ್​ ಮೊರೆ ಹೋಗಿದ್ದರು. ಅದರಂತೆ ಇವತ್ತು ಮೊದಲನೇ ಪ್ರಕರಣವಾಗಿ ಡಿಕೆಶಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್​​ ವಿಚಾರಣೆ ನಡೆಸಲಿದೆ. ಡಿಕೆಶಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ಮತ್ತು ದಯಾನ್ ಕೃಷ್ಣನ್ ವಾದ ಮಂಡಿಸಲಿದ್ದಾರೆ. ಇಂದು ವಾದ ಪ್ರತಿವಾದ ಆಲಿಸಿ, ನಾಳೆಗೆ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ.

ಇನ್ನು ಡಿಕೆಶಿಗೆ ಜಾಮೀನು ನೀಡದಂತೆ ಇಡಿ ವಾದಿಸುವ ಸಾಧ್ಯತೆ ಇದೆ. ಮೊದಲಿಗೆ ಮೂರ್ನಾಲ್ಕು ದಿನ ಡಿಕೆಶಿ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ನಂತರ ವಶಕ್ಕೆ ಪಡೆದು 10 ದಿನ ವಿಚಾರಣೆ ನಡೆಸಿದ್ದರು. ಅಲ್ಲದೆ ತಿಹಾರ್ ಜೈಲಿನಲ್ಲೂ ಸಹ 2 ದಿನ ವಿಚಾರಣೆ ನಡೆಸಿದ್ದರು.

ಅತ್ತ ಡಿಕೆಶಿ ಪರ ವಕೀಲರು ಅನಾರೋಗ್ಯದ ಕಾರಣ ನೀಡಿ ಜಾಮೀನು ನೀಡುವಂತೆ ಒತ್ತಾಯ ಮಾಡುವ ಸಾಧ್ಯತೆ ಇದೆ.

 

 

Contact Us for Advertisement

Leave a Reply