ಡಿಕೆಶಿಗೆ ಹೊಸ ಟ್ರಬಲ್..ಇಡಿ ಬಳಿಕ ಸಿಬಿಐ ಡ್ರಿಲ್ ಶುರು..!

ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಸಂಪಾದನೆ ಆರೋಪ ಇಡಿ ವಿಚಾರಣೆ ಎದುರಿಸಿ, ಜೈಲಿಗೆ ಹೋಗಿರೋ ಡಿ.ಕೆ.ಶಿವಕುಮಾರ್ ಗೆ ಈ ಸಿಬಿಐ ಕಂಟಕ ಎದುರಾಗಿದೆ. ಐಟಿ ದಾಳಿ ವೇಳೆ ಡಿಕೆಶಿ ನಿವಾಸದಲ್ಲಿ ಭಾರಿ ಪ್ರಮಾಣದಲ್ಲಿ ನಗದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ತನಿಖೆಯಲ್ಲಿ ಸಹಕರಿಸುವಂತೆ ಇಡಿ ಸಿಬಿಐಗೆ ಮನವಿ ಮಾಡಿತ್ತು. ಅದರಂತೆ ತನಿಖೆಗೆ ಅನುಮತಿ ನೀಡುವಂತೆ ಸಿಬಿಐ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈಗ ರಾಜ್ಯ ಗೃಹಸಚಿವಾಲಯ ಒಪಿಗೆ ಸೂಚಿಸಿದ್ದು, ಸಿಬಿಐ ತನಿಖೆ ಆರಂಭವಾಗಲಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದೆ. ಇದೇ ಪ್ರಕರಣದಲ್ಲಿ ಡಿಕೆಶಿ ಜೈಲು ಸೇರಿದ್ದಾರೆ. ಇದೀಗ ಹೊಸ ಪ್ರಕರಣ ದಾಖಲಾಗಿದ್ದರಿಂದ ಡಿ.ಕೆ.ಶಿವಕುಮಾರ್‍ಗೆ ಸದ್ಯಕ್ಕೆ ಜಾಮೀನು ಸಿಗೋ ಸಾಧ್ಯತೆ ಇಲ್ಲ. ಇನ್ನು ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಲು ಸಿಬಿಐ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಬಳಿಕ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ.

ಇನ್ನು ಇವತ್ತು ಶಿವಕುಮಾರ್ ಸೋದರ, ಸಂಸದ ಡಿ.ಕೆ.ಸುರೇಶ್ ಅವರಿಗೂ ಇ.ಡಿ ಸಮನ್ಸ್ ಜಾರಿ ಮಾಡಿದೆ. ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಇ.ಡಿ ಕಚೇರಿಯಲ್ಲಿ ಸುರೇಶ್ ವಿಚಾರಣೆ ನಡೆಯಲಿದೆ.

Contact Us for Advertisement

Leave a Reply