ಇಂದು ಡಿಕೆಶಿ ಭವಿಷ್ಯ..! ಜೈಲೇ ಫಿಕ್ಸಾ..? ಜಾಮೀನು ಸಿಗುತ್ತಾ..?

ಅಕ್ರಮ ಹಣ ವರ್ಗಾವಣೆ ಕೇಸ್‍ನಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಇವತ್ತು ತೀರ್ಪು ಹೊರಬೀಳಲಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಡ್ಜ್ ಅಜಯ್ ಕುಮಾರ್ ಕುಹರ್ ತೀರ್ಪು ನೀಡಲಿದ್ದಾರೆ. ಕಳೆದ ವಾರ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಇಂದು ಮಧ್ಯಾಹ್ನ 3.30ಕ್ಕೆ ತೀರ್ಪು ಹೊರಬೀಳಲಿದೆ. ಒಂದು ವೇಳೆ ಡಿಕೆಶಿಗೆ ಜಾಮೀನು ಸಿಗದಿದ್ದರೆ ಮತ್ತೆ ಅಕ್ಟೋಬರ್ 1ರವರೆಗೆ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಒಂದ್ವೇಳೆ ಜಾಮೀನು ಸಿಕ್ಕಲ್ಲಿ ಜೈಲಿನಿಂದ ಬಿಡುಗಡೆಯಾಗಿ ವಾಪಸ್ ಆಗಲಿದ್ದಾರೆ.

Contact Us for Advertisement

Leave a Reply