ಇನ್ನೂ 10 ದಿನ ಡಿಕೆಶಿಗೆ ಜೈಲೇ ಗತಿ..! ಜಡ್ಜ್ ಮುಂದೆ ಡಿಕೆಶಿ ನೋವಿನ ಮಾತು..

ಡಿ.ಕೆ.ಶಿವಕುಮಾರ್ ಅವರಿಗೆ ಸದ್ಯಕ್ಕೆ ಜೈಲಿನಿಂದ ಹೊರಬರೋ ಭಾಗ್ಯವೇ ಇಲ್ಲ ಅನ್ಸುತ್ತೆ. ಯಾಕಂದ್ರೆ ಮತ್ತೆ 10 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಈ ಮೂಲಕ ಸತತ 3ನೇ ಬಾರಿಗೆ ನ್ಯಾಯಾಂಗ ಬಂಧನ ವಿಸ್ತರಿಸಿದಂತಾಗಿದೆ.

ಡಿಕೆಶಿ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಇವತ್ತು ದೆಹಲಿಯ ರೋಸ್ ಅವೆನ್ಯೂ ಕೋರ್ಟ್​​​ಗೆ ಹಾಜರುಪಡಿಸಲಾಯ್ತು. ಈ ವೇಳೆ ಕೋರ್ಟ್​ ಹಾಲ್​ನಲ್ಲಿ ನೋವು ತೋಡಿಕೊಂಡ ಡಿ.ಕೆ.ಶಿವಕುಮಾರ್​​, ನನ್ನನ್ನು ತಿಹಾರ್ ಜೈಲಿನಲ್ಲೇ ವಿಚಾರಣೆ ನಡೆಸಿದ್ದಾರೆ. ಚೇರ್ ನೀಡದೇ ಗಂಟೆಗಟ್ಟಲೆ ನಿಲ್ಲಿಸಿಕೊಂಡೇ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನಾನು 30 ವರ್ಷಗಳ ಹಿಂದೆಯೇ ಬಂದೀಖಾನೆ ಸಚಿವನಾಗಿದ್ದೆ. ನನಗೂ ಜೈಲಿನ ಕೆಲವು ನಿಯಮಗಳ ಬಗ್ಗೆ ಗೊತ್ತು. ಆದ್ರೆ ನನ್ನನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳಬಾರದಿತ್ತು ಅಂದ್ರು.

ಇನ್ನು ಮಧ್ಯಾಹ್ನ 3.30ಕ್ಕೆ ದೆಹಲಿಯ ಹೈಕೋರ್ಟ್​​​ನಲ್ಲಿ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.

Contact Us for Advertisement

Leave a Reply