ಡಿಕೆಶಿಗೆ ಮತ್ತಷ್ಟು ದಿನ ಜೈಲೂಟ..! ನ್ಯಾಯಾಂಗ ಬಂಧನ ವಿಸ್ತರಣೆ..

ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇನ್ನಷ್ಟು ದಿನ ಜೈಲುವಾಸ ಗಟ್ಟಿಯಾಗಿದೆ. ಜಾರಿ ನಿರ್ದೇಶನಾಲಯ ಸೆ. 3ರಂದು ಡಿಕೆಶಿಯವರನ್ನು ಬಂಧಿಸಿತ್ತು. ನಂತರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಇವತ್ತಿಗೆ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಇವತ್ತು ಪುನಃ ಕೋರ್ಟ್ ಮುಂದೆ ಹಾಜರುಪಡಿಸಲಾಯ್ತು.

ಆದ್ರೆ ಈ ವೇಳೆ ವಾದಿಸಿದ ಅಮಿತ್ ಮಹಾಜನ್, ಡಿಕೆಶಿ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಮನವಿ ಮಾಡಿದ್ರು. ಅದರಂತೆ ಡಿಕೆಶಿ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಿದ ನ್ಯಾಯಾಲಯ, ಅ.4 ಮತ್ತು 5ರಂದು ಬೆಳಗ್ಗೆ 11ರಿಂದ 3ರವರೆಗೆ ವಿಚಾರಣೆ ನಡೆಸಲು ಅನುಮತಿ ನೀಡಿದೆ.

ನಿನ್ನೆಯಷ್ಟೇ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಿತ್ತು.

Contact Us for Advertisement

Leave a Reply