ಯಾರೇ ತನಿಖೆ ನಡೆಸಿದ್ರೂ ಆರೋಪ ಮುಖ್ತರಾಗುತ್ತೇವೆ: `ಬಂಡೆ’ ಬ್ರದರ್ ಮಾತು

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಜೈಲು ಸೇರಿದ್ದಾರೆ. ಈಗ ಅವರ ಸಹೋದರ, ಸಂಸದ ಡಿ.ಕೆ ಸುರೇಶ್‍ಗೂ ಇಡಿ ಸಂಕಷ್ಟ ಎದುರಾಗಿದೆ. ದೆಹಲಿಯ ಇಡಿ ಕಚೇರಿಗೆ ತೆರಳಿ ಸುರೇಶ್ ವಿಚಾರಣೆಗೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ಇಡಿ ಆದ್ರೂ ತನಿಖೆ ನಡೆಸಲಿ, ಸಿಬಿಐ ಆದ್ರೂ ತನಿಖೆ ನಡೆಸಲಿ. ಎಲ್ಲಾ ಪ್ರಶ್ನೆಗಳಿಗೆ ನಮ್ಮಲ್ಲಿ ಸಮರ್ಪಕವಾದ ಉತ್ತರವಿದೆ. ಎಲ್ಲಾ ಆರೋಪಗಳಿಂದ ನಾವು ಮುಕ್ತರಾಗಿ ಬರುತ್ತೇವೆ ಎಂಬ ವಿಶ್ವಾಸವಿದೆ ಅಂದ್ರು.

ಮತ್ತೊಂದ್ಕಡೆ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಕಂಟಕ ಎದುರಾಗಿದೆ. ಐಟಿ ದಾಳಿ ವೇಳೆ ಡಿಕೆಶಿ ನಿವಾಸದಲ್ಲಿ ಭಾರಿ ಪ್ರಮಾಣದಲ್ಲಿ ನಗದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ತನಿಖೆಯಲ್ಲಿ ಸಹಕರಿಸುವಂತೆ ಇಡಿ ಸಿಬಿಐಗೆ ಮನವಿ ಮಾಡಿತ್ತು. ಅದರಂತೆ ತನಿಖೆಗೆ ಅನುಮತಿ ನೀಡುವಂತೆ ಸಿಬಿಐ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈಗ ರಾಜ್ಯ ಗೃಹಸಚಿವಾಲಯ ಒಪಿಗೆ ಸೂಚಿಸಿದ್ದು, ಸಿಬಿಐ ತನಿಖೆ ಆರಂಭವಾಗಲಿದೆ.

Contact Us for Advertisement

Leave a Reply