ಡಿ.ಕೆ.ಸುರೇಶ್ ಬೆಳೆದು ಬಂದ ಹಾದಿ ನಿಮಗೆ ಗೊತ್ತಾ..?

ಹಾಯ್ ಫ್ರೆಂಡ್ಸ್, ಸದಾ ಅಣ್ಣನ ಬೆನ್ನಿಗೆ ನಿಲ್ಲುವ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಜೀವನದ ಸತ್ಯಕಥೆ ಗೊತ್ತಾ..? ಡಿಕೆಶಿ ಬಳಿ 840 ಕೋಟಿ ಮೌಲ್ಯದ ಆಸ್ತಿ ಇದ್ರೆ, ಡಿಕೆ ಸುರೇಶ್ ಬಳಿ ಇರುವ ಆ ಸ್ತಿ ಎಷ್ಟು..? ಇಂಥ ಡಿಕೆಸು ಬೆಳೆದುಬಂದ ಹಾದಿ ಹೇಗಿದೆ..? ಈ ವೆರಿ ಇಂಟರೆಸ್ಟಿಂಗ್ ಮಾಹಿತಿಯನ್ನು ನಾವು ನಿಮಗೆ ಕೊಡ್ತಾ ಹೋಗ್ತೀವಿ ನೋಡಿ..

ಫ್ರೆಂಡ್ಸ್ ಡಿ.ಕೆ.ಸುರೇಶ್ ಡಿಸೆಂಬರ್ 18, 1966ರಲ್ಲಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯಲ್ಲಿ ಜನಿಸಿದರು. ತಂದೆ ಡಿ ಕೆಂಪೇಗೌಡ, ತಾಯಿ ಗೌರಮ್ಮ. ಡಿಕೆ ಸುರೇಶ್ ಅಣ್ಣನೆ ಡಿಕೆ ಶಿವಕುಮಾರ್. ಪಿಯುಸಿವರೆಗೆ ಓದಿರೋ ಡಿಕೆ ಸುರೇಶ್ ವೃತ್ತಿಯಲ್ಲಿ ರೈತ ಹಾಗೂ ಉದ್ಯಮಿ.

2013ರಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಗೆಲುವು
ಫ್ರೆಂಡ್ಸ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ 2009ರಲ್ಲಿ ಮೊದಲ ಬಾರಿ ಚುನಾವಣೆ ನಡೆಯಿತು. ಆಗ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಹೆಚ್.ಡಿ ಕುಮಾರಸ್ವಾಮಿ ಭರ್ಜರಿ ಗೆಲುವು ದಾಖಲಿಸಿದ್ದರು. ಆದರೆ 2013ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಕುಮಾರಸ್ವಾಮಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ರು. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ 2013ರಲ್ಲಿ ಉಪ ಚುನಾವಣೆ ನಡೆಯಿತು. ಈ ಉಪಚುನಾವಣೆಗೆ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾರನ್ನ ಕಣಕ್ಕಿಳಿಸಿದರು. ಆಗ ಅನಿತಾ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ಇದೇ ಡಿ.ಕೆ. ಸುರೇಶ್. ಚೊಚ್ಚಲ ಪ್ರಯತ್ನದಲ್ಲೇ ಅನಿತಾ ಕುಮಾರಸ್ವಾಮಿಯನ್ನ 1 ಲಕ್ಷದ 37 ಸಾವಿರ ಮತಗಳ ಅಂತರದಿಂದ ಮಣಿಸಿದ ಡಿ.ಕೆ ಸುರೇಶ್, ಲೋಕಸಭೆ ಮೆಟ್ಟಿಲು ಹತ್ತಿದ್ರು. ಬಳಿಕ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ರು. ಇನ್ನು 2019 ರಲ್ಲಿ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಬಾರಿಸಿದ್ರು.

338 ಕೋಟಿ ಆಸ್ತಿಯ ಒಡೆಯ ಡಿ.ಕೆ. ಸುರೇಶ್
ಫ್ರೆಂಡ್ಸ್ ಡಿ.ಕೆ ಶಿವಕುಮಾರ್ ಆಸ್ತಿ 840 ಕೋಟಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಡಿಕೆ ಸುರೇಶ್ ಕೂಡ ಬರೋಬ್ಬರಿ 338 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ. ಇದರಲ್ಲಿ ಚರಾಸ್ತಿ 33 ಕೋಟಿ ಇದ್ದರೆ, ಸ್ಥಿರಾಸ್ತಿ 305 ಕೋಟಿಯಷ್ಟಿದೆ. ಅಂದ್ಹಾಗೆ ಇದು ನಾವು ಹೇಳ್ತಿರೋದಲ್ಲ. 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಡಿ.ಕೆ.ಸುರೇಶ್ ಘೋಷಿಸಿಕೊಂಡ ಆಸ್ತಿಯ ಮೌಲ್ಯ ಇದು. ಇನ್ನು 2014ರಲ್ಲಿ ಡಿಕೆ ಸುರೇಶ್ ಆಸ್ತಿ ಮೌಲ್ಯ ಕೇವಲ 85 ಕೋಟಿಯಷ್ಟಿತ್ತು. ಆದ್ರೆ ಐದೇ ವರ್ಷದಲ್ಲಿ 252 ಕೋಟಿಯಷ್ಟು ಹೆಚ್ಚಾಗಿ, 338 ಕೋಟಿ ತಲುಪಿದೆ. ಅಂದ್ರೆ 4 ಪಟ್ಟು ಹೆಚ್ಚಾಗಿದೆ.

ಐಶ್ವರ್ಯಾಗೆ 5 ಕೋಟಿ ಸಾಲ ನೀಡಿರುವ ಚಿಕ್ಕಪ್ಪ
ಹೌದು ಫ್ರೆಂಡ್ಸ್ ಚುನಾವಣಾ ಆಯೋಗಕ್ಕೆ ಡಿಕೆ ಸುರೇಶ್ ಸಲ್ಲಿಸಿದ ಅಫಿಡವಿಟ್ನಲ್ಲಿ ತಾವು 51 ಕೋಟಿ ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಆ ಪೈಕಿ ಅಣ್ಣ ಡಿಕೆ ಶಿವಕುಮಾರ್ ಗೆ ಒಂದು ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಹಾಗೆ ಡಿಕೆಶಿ ಪುತ್ರಿ ಐಶ್ವರ್ಯಗೆ ಬರೋಬ್ಬರಿ 5 ಕೋಟಿ 87 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದಾರೆ.

ಡಿ.ಕೆ. ಸುರೇಶ್ ವಿರುದ್ಧ 5 ಕ್ರಿಮಿನಲ್ ಪ್ರಕರಣ
ಹೌದು ಫ್ರೆಂಡ್ಸ್ ಸ್ವತ ಡಿಕೆ ಸುರೇಶ್ ಅವರೇ ಘೋಷಿಸಿಕೊಂಡಿರುವಂತೆ ಅವರ ವಿರುದ್ಧ ಒಟ್ಟು ಐದು ಕ್ರಿಮಿನಲ್ ಪ್ರಕರಣಗಳಿವೆ. ಬಹುತೇಕ ಪ್ರಕರಣಗಳು ಅರಣ್ಯ ಇಲಾಖೆಗೆ ಸೇರಿವೆ ಅನ್ನೋದು ಮತ್ತೊಂದು ವಿಶೇಷ.

Contact Us for Advertisement

Leave a Reply