ಹೊಸ ವಿವಾದದಲ್ಲಿ ಸ್ಟಾರ್‌ ಫುಟ್ಬಾಲ್‌ ಆಟಗಾರ ರೊನಾಲ್ಡೊ! ಏನಿದು ಪ್ರಕರಣ?

masthmagaa.com:

ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ನಾಳೆಯಿಂದ ಆರಂಭವಾಗಲಿವೆ. ಇದ್ರ ನಡುವೆಯೇ ಸ್ಟಾರ್‌ ಫುಟ್ಬಾಲ್‌ ಆಟಗಾರ ಹಾಗೂ ಪೋರ್ಚುಗಲ್‌ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ವಿಶ್ವಕಪ್ ಪ್ರಾರಂಭವಾಗುವ ಮೊದಲು, ರೊನಾಲ್ಡೊ ಸಂದರ್ಶನವೊಂದನ್ನ ನೀಡಿದ್ದು, ತಮ್ಮ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಮ್ಯಾನೇಜರ್ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದರು. ರೊನಾಲ್ಡೊ ಅವರ ಈ ಆರೋಪ ಫುಟ್ಬಾಲ್ ಲೋಕದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಕ್ಲಬ್ ಕೂಡ ರೊನಾಲ್ಡೊ ವಿರುದ್ಧ ಕ್ರಮಕ್ಕೆ ನಿರ್ಧರಿಸಿದೆ. ಈ ಬಗ್ಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಹೇಳಿಕೆ ಬಿಡುಗಡೆ ಮಾಡಿದೆ. ಅದ್ರಲ್ಲಿ ರೊನಾಲ್ಡೊ ಕ್ಲಬ್‌ಗೆ ತಿಳಿಸದೆ ಸಂದರ್ಶನ ನೀಡಿದ್ದಲ್ಲದೇ, ಒಪ್ಪಂದದ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಹೀಗಾಗಿ ಕ್ಲಬ್ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ವಕೀಲರನ್ನ ನಿಯೋಜಿಸಿದೆ. ಅವರನ್ನ ಕ್ಲಬ್‌ನಿಂದ ಬ್ಯಾನ್ ಮಾಡಲು ಚಿಂತಿಸಿದೆ. ವಿಶ್ವಕಪ್ ಬಳಿಕ ಕ್ಲಬ್​ನ ತರಬೇತಿ ಮೈದಾನಕ್ಕೆ ಬರದಂತೆ ರೊನಾಲ್ಡೊಗೆ ಸೂಚಿಸಲಾಗಿದೆ ಅಂತ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply