ನೂತನ ನಿಯಮಗಳನ್ನ ಜಾರಿ ಮಾಡಿದ ಏರ್‌ ಇಂಡಿಯಾ! ಏನದು?

masthmagaa.com:

ಒಂದಿಲ್ಲೊಂದು ತೊಂದ್ರೆಗೆ ಸಿಲುಕಿ ದಂಡ ಹಾಕಿಸಿಕೊಳ್ತಿರೋ ಏರ್‌ ಇಂಡಿಯಾ ಇದೀಗ ನೂತನ ನಿಯಮಗಳನ್ನ ಜಾರಿ ಮಾಡಿದೆ. ಈ ನೂತನ ನಿಯಮದ ಪ್ರಕಾರ ವಿಮಾನ ಸಿಬ್ಬಂದಿಗಳು ಪ್ರಯಾಣಿಕರಿಗೆ ಮದ್ಯಪಾನ ಪೂರೈಕೆಯನ್ನ ನಿರಾಕರಿಸ್ಬೋದು ಅಂತ ತಿಳಿಸಿದೆ. ಜೊತೆಗೆ ಪ್ರಯಾಣಿಕರು ಅಹಿತಕರ ರೀತಿಯಲ್ಲಿ ನಡೆದುಕೊಳ್ಳದ ಹಾಗೆ ಅವರ ನಡುವಳಿಕೆಯನ್ನ ಸಿಬ್ಬಂದಿ ಮಾನಿಟರ್‌ ಮಾಡ್ಬೇಕು. ಪ್ರಯಾಣಿಕರನ್ನ ಕುಡುಕ ಅಂತ ಕರೆಯದೆ ಅವ್ರ ನಡುವಳಿಕೆ ಸರಿಯಾಗಿಲ್ಲ ಅಂತ ಸಮಾಧಾನವಾಗಿ ಹೇಳಿ. ಈಗಾಗಲೇ ಸಾಕಷ್ಟು ಮದ್ಯಪಾನ ಮಾಡಿದ ವ್ಯಕ್ತಿಗೆ ಮತ್ತೆ ಮದ್ಯವನ್ನ ನೀಡ್ಬೇಡಿ ಅಂತ ತಿಳಿಸಿದೆ. ಅಷ್ಟೆ ಅಲ್ದೆ ಪ್ರಯಾಣಿಕರು ತಮ್ಮ ವಾಯ್ಸ್‌ ರೈಸ್‌ ಮಾಡಿ ಮಾತಾಡಿದ್ರೂ ಸಿಬ್ಬಂದಿಗಳು ವಾಯ್ಸ್‌ ರೈಸ್‌ ಮಾಡದೇ ಪರಿಸ್ಥಿತಿಯನ್ನ ನಿಭಾಯಿಸ್ಬೇಕು ಅಂತ ಸೂಚನೆಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆಯಿಂದ ಡಿಜಿಸಿಎ ಏರ್‌ ಇಂಡಿಯಾಗೆ ದಂಡ ವಿಧಿಸಿತ್ತು. ಈ ಕಾರಣಕ್ಕೆ ಏರ್‌ ಇಂಡಿಯಾ ಸಿಬ್ಬಂದಿಗಳಿಗೆ ಕೆಲವು ನಿಯಮಗಳನ್ನ ಜಾರಿ ಮಾಡಿದೆ.

-masthmagaa.com

Contact Us for Advertisement

Leave a Reply