ಟಿ20 ವಿಶ್ವಕಪ್​​​ಗೆ ಬಹುಮಾನ ಫಿಕ್ಸ್! ಎಷ್ಟು ಗೊತ್ತಾ..?

masthmagaa.com:

ಇದೇ ತಿಂಗಳು ಶುರುವಾಗಲಿರೋ ಟ್ವೆಂಟಿ ಟ್ವೆಂಟಿ ವಿಶ್ವಕಪ್​​ಗೆ ಐಸಿಸಿ ಬಹುಮಾನದ ಕುರಿತು ಮಾಹಿತಿ ನೀಡಿದೆ. ಟೂನಿಯಲ್ಲಿ ಗೆಲ್ಲೋ ತಂಡ 16 ಲಕ್ಷ ಅಮೆರಿಕನ್ ಡಾಲರ್ ಅಂದ್ರೆ 11.84 ಕೋಟಿ ರೂಪಾಯಿ ಬಹುಮಾನ ಗೆಲ್ಲಲಿದ್ದಾರೆ. ಅದೇ ರೀತಿ ರನ್ನರ್ ಅಪ್​​​ಗೆ ಇದ್ರ ಅರ್ಧಭಾಗದಷ್ಟು ದುಡ್ಡು ಸಿಗಲಿದೆ. ಅದೇ ರೀತಿ 3 ಮತ್ತು 4ನೇ ಸ್ಥಾನಗಳಿಗೆ 2.96 ಕೋಟಿ ರೂಪಾಯಿ ಪ್ರೈಝ್ ಫಿಕ್ಸ್ ಮಾಡಲಾಗಿದೆ. ಅದೇ ರೀತಿ ಸೂಪರ್ 12ಗೆ ಬರೋ ತಂಡಗಳಿಗೆ 52 ಲಕ್ಷ ರೂಪಾಯಿ ದುಡ್ಡು ಬಹುಮಾನವಾಗಿ ನಿಗದಿಪಡಿಸಲಾಗಿದೆ. ಅಂದಹಾಗೆ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿರೋ ಈ ಟೂರ್ನಿಯಲ್ಲಿ 16 ತಂಡಗಳು ಭಾಗಿಯಾಗಲಿವೆ.

-masthmagaa.com

Contact Us for Advertisement

Leave a Reply