masthmagaa.com:

ಭಾರತದಲ್ಲಿ ಕೊರೋನಾ ಹರಡಲು ಫೆಬ್ರವರಿ ತಿಂಗಳಲ್ಲಿ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವೇ ಕಾರಣ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ವಿದೇಶದಿಂದ ಬಂದಿದ್ದರು, ಅಲ್ಲದೆ ಕಾರ್ಯಕ್ರಮದಲ್ಲಿ ಕೊರೋನಾ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಅನ್ನೋ ಆರೋಪ ಕೇಂದ್ರ ಸರ್ಕಾರದ ವಿರುದ್ಧ ಕೇಳಿ ಬಂದಿತ್ತು.

ಈ ಬಗ್ಗೆ ರಾಜ್ಯಸಭೆಗೆ ಲಿಖಿತ ಮಾಹಿತಿ ಕೊಟ್ಟಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್, ಕೊರೋನಾ ಹರಡುವುದಕ್ಕೂ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ. ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿದ್ದು ಫೆಬ್ರವರಿ 24-25ರಂದು. ಆಗ ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸುವ ಅವಶ್ಯಕತೆ ಇರಲಿಲ್ಲ. ದೇಶದ ಎಲ್ಲಾ ಏರ್​ಪೋರ್ಟ್​ಗಳಲ್ಲಿ ಈ ನಿಯಮ ಜಾರಿಗೆ ಬಂದಿದ್ದು ಮಾರ್ಚ್​ 4ರಂದು. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್​ ಅನ್ನು ಸಾಂಕ್ರಮಿಕ ರೋಗ ಅಂತ ಘೋಷಿಸಿದ್ದು ಮಾರ್ಚ್​ 11ರಂದು’ ಅಂತ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಈ ಮೂಲಕ ಗುಜರಾತ್​ನಲ್ಲಿ ಟ್ರಂಪ್​ ಕಾರ್ಯಕ್ರಮ ನಡೆಯುವಾಗ ಪರಿಸ್ಥಿತಿ ಭಿನ್ನವಾಗಿತ್ತು, ಯಾವುದೇ ನಿಯಮಗಳು ಇರಲಿಲ್ಲ. ಕಾರ್ಯಕ್ರಮ ನಡೆದು ಸಾಕಷ್ಟು ದಿನಗಳಾದ ನಂತರ ನಿಯಮಗಳು ಬಂದವು. ಹೀಗಾಗಿ ಟ್ರಂಪ್ ಕಾರ್ಯಕ್ರಮದಿಂದ ದೇಶದಲ್ಲಿ ಕೊರೋನಾ ವೈರಸ್ ಹರಡಿತು ಅನ್ನೋಕ್ಕಾಗಲ್ಲ ಎಂಬ ರೀತಿಯಲ್ಲಿ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply