ಚೈನಾದಲ್ಲಿ ಮುಸ್ಲಿಮರ ನರಸಂಹಾರ: ಡಚ್‌ ಪಾರ್ಲಿಮೆಂಟ್‌ನಲ್ಲಿ ನಿರ್ಣಯ

masthmagaa.com:

ಚೀನಾದಲ್ಲಿ ಅಲ್ಪಸಂಖ್ಯಾತ ಉಘರ್ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗ್ತಾ ಇದೆ ಅನ್ನೋ ಆರೋಪಗಳು ಕೇಳಿ ಬರುತ್ತಿವೆ.. ಈ ನಡುವೆ ಡಚ್ ಪಾರ್ಲಿಮೆಂಟ್​​ನಲ್ಲಿ ಈ ಸಂಬಂಧ ನಿರ್ಣಯ ಮಂಡಿಸಲಾಗಿದೆ. ಈ ಮೂಲಕ ಚೀನಾದಲ್ಲಿ ಉಘರ್ ಮುಸ್ಲಿಮರ ನರಸಂಹಾರ ನಡೆಯುತ್ತಿದೆ ಅಂತ ಹೇಳಲಾಗಿದೆ. ಡಚ್ ಈ ಹೆಜ್ಜೆ ಇಟ್ಟ ಮೊದಲ ಯೂರೋಪಿಯನ್ ದೇಶವಾಗಿದೆ.

ಚೀನಾದ ‌ ಶಿಂಜಿಯಾಂಗ್​​ನಲ್ಲಿ 10 ಲಕ್ಷಕ್ಕೂ ಅಧಿಕ ಮುಸ್ಲಿಮರನ್ನು ಕ್ಯಾಂಪ್​​​ನಲ್ಲಿ ಕೂಡಿಡಲಾಗಿದೆ. ಜೊತೆಗೆ ನಿರಂತರವಾಗಿ ಹಿಂಸೆ ನೀಡಲಾಗ್ತಾ ಇದೆ ಅಂತ ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗ ಮತ್ತು ಹಲವು ಸಾಮಾಜಿಕ ಹೋರಾಟಗಾರರು ಆರೋಪಿಸುತ್ತಲೇ ಇದ್ದಾರೆ. ಆದ್ರೆ ಚೀನಾ ಮಾತ್ರ ನಾವೇನೂ ಹಿಂಸೆ ನೀಡುತ್ತಿಲ್ಲ.. ಅಲ್ಲಿ ಉಘರ್ ಮುಸ್ಲಿಂ ಸಮುದಾಯದವರೆಗೆ ಅಗತ್ಯ ಶಿಕ್ಷಣಗಳನ್ನು ನೀಡುತ್ತಿದ್ದೇವೆ ಅಂತಲೇ ಹೇಳಿಕೊಂಡು ಬಂದಿವೆ.

-masthmagaa.com

Contact Us for Advertisement

Leave a Reply