ಭಾರತ ಜನ್ಮ ಪಡೆದಿದ್ದು ಹೇಗೆ ಗೊತ್ತಾ..? ಸೃಷ್ಟಿಯ ರೋಚಕ ಮಾಹಿತಿ ನೋಡಿ…

ಹಾಯ್ ಫ್ರೆಂಡ್ಸ್…ಭಾರತದ ಜನ್ಮ ಹೇಗಾಯ್ತು ಗೊತ್ತಾ?

ಹೌದು… ಇವತ್ತಿಗೆ ಸರಿಯಾಗಿ ಇಪ್ಪತ್ತು ಕೋಟಿ ವರ್ಷಗಳ ಹಿಂದೆ ಈಗಿನ ರೀತಿ 7ಖಂಡಗಳು ಇರಲಿಲ್ಲ. ಭೂಮಿಯ ಮೇಲಿನ ಭೂಭಾಗ ಒಂದೇಕಡೆ ಅಂಟಿಕೊಂಡು ಬಿಟ್ಟಿತ್ತು. ಅದನ್ನ ಸೂಪರ್ ಕಾಂಟಿನೆಂಟ್ ಅಥವಾ ಮಹಾ ಖಂಡ ಅಂತ ಕರೆಯಬಹುದು. ಅದನ್ನ ಪ್ಯಾಂಜಿಯಾ ಅಂತ ಕರೆಯಲಾಗುತ್ತೆ. ಈ ಪ್ಯಾನ್ಜಿಯಾದ ನಾಲ್ಕು ದಿಕ್ಕುಗಳಲ್ಲೂ ಒಂದು ಬೃಹತ್ತಾದ ಮಹಾಸಾಗರವಿತ್ತು. ಈ ಮಹಾಸಾಗರದ ಹೆಸರಾಗಿತ್ತು ಪೈಥಾಲಾಸಾ! ಇವಾಗ ನಾವು ನೋಡುತ್ತಿರುವ 7ಖಂಡಗಳು ಕೂಡ ಇದೇ ಮಹಾ ಖಂಡ ಪ್ಯಾಂಜಿಯಾ ದಿಂದ ತುಂಡಾಗಿ ಬೇರ್ಪಟ್ಟ ಖಂಡಗಳಾಗಿವೆ. ವಿಜ್ಞಾನಿ ಆಲ್ಫ್ರೆಡ್ ವ್ಯಾಗ್ನರ್ ಈ ಥಿಯರಿನ್ನ ಮುಂದಿಟ್ಟರು. ಇದು ಸುಮಾರು 250 ರಿಂದ 150 ಮಿಲಿಯನ್ ವರ್ಷಗಳಲ್ಲಿ ಹಂತಹಂತವಾಗಿ ನಡೆದಿರುವ ಪ್ರಕ್ರಿಯೆ. ಆಗಿನ ಕಾಲದಲ್ಲಿ ಭೂಮಿಯ ಮೇಲೆ ನಿಧಾನವಾಗಿ, ಡೈನೋಸಾರ್ ನಂತಹ ಜೀವಿಗಳ ಬೆಳವಣಿಗೆ ಆಯ್ತು ಅಂತ ಹೇಳುತ್ತಾರೆ.

ಫ್ರೆಂಡ್ಸ್… ಭೂಮಿಯ ಗರ್ಭದಲ್ಲಿ ಪ್ರತಿಕ್ಷಣವೂ ಟೆಕ್ಟಾನಿಕ್ ಪ್ಲೇಟ್ಗಳು ಚೂರು ಚೂರೇ ಮೂವ್ ಆಗುತ್ತಿರುತ್ತವೆ. ಈ ಕಾರಣದಿಂದಾಗಿ ಈ ಭೂಮಿ ಮೇಲೆ ನಿರಂತರವಾಗಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಭೂಭಾಗಗಳು ತುಂಡುತುಂಡಾಗಿ ದೂರ‌ ದೂರಕ್ಕೆ ಚಲಿಸುತ್ತಿರುತ್ತವೆ. ಆದರೆ ಇದ್ಯಾವುದು ಸಡನ್ನಾಗಿ ಆಗುವಂತಹ ಬೆಳವಣಿಗೆ ಅಲ್ಲ. ಇವೆಲ್ಲವೂ ಕೋಟ್ಯಾಂತರ ವರ್ಷಗಳಲ್ಲಿ ಹಂತಹಂತವಾಗಿ ಆಗುತ್ತಾ ಬಂದ ಬೆಳವಣಿಗೆ. ಭೂಮಿಯ ಅತ್ಯಂತ ಅದ್ಭುತ ನೈಸರ್ಗಿಕ ಪ್ರಕ್ರಿಯೆಯಿಂದಾಗಿ ಈಗ ನಾವು ನೋಡುತ್ತಿರುವ 7ಖಂಡಗಳ ರಚನೆಯಾಗಿದೆ. ಅದೇ ರೀತಿ ನಮ್ಮ ಪುಣ್ಯಭೂಮಿ ಯಾಗಿರುವ ಭಾರತದ ಜನ್ಮವಾಗಿದೆ.

ಆಲ್ಫ್ರೆಡ್ ವ್ಯಾಗ್ನರ್ ಪ್ರಕಾರ ಭೂಮಿಯ ಟೆಕ್ಟೋನಿಕ್ ಪ್ಲೇಟ್ ಗಳ ಚಲನೆಯಿಂದಾಗಿ ಮಹಾ ಖಂಡದ ವಿಘಟನೆಯಾಗಿ, ಮೊದಲು ಭೂಮಿಯ ಮೇಲೆ ಎರಡು ಕಂಡಗಳ ರಚನೆಯಾಯಿತು. ಅದರ ಉತ್ತರ ಭಾಗವನ್ನು ಲವ್ರಾಸಿಯಾ ಅಂತ ಕರೆಯಲಾದರೆ, ದಕ್ಷಿಣ ಭಾಗವನ್ನು ಗೊಂಡ್ವಾನಾ ಅಂತ ಕರೆಯಲಾಯಿತು.

ಆಗ ಡಿವೈಡ್ ಆದ ಭೂಭಾಗದ ಉತ್ತರ ಭಾಗವಾದ ಲವ್ರಾಸಿಯಾದಲ್ಲಿ, ಉತ್ತರ ಅಮೇರಿಕ, ಯೂರೋಪ್ ಮತ್ತು ಏಷ್ಯಾದ ರಚನೆ ಆಯಿತು. ಅದೇ ರೀತಿ ದಕ್ಷಿಣ ಭಾಗವಾದ ಗೊಂಡ್ವಾನಾ ದಿಂದ ದಕ್ಷಿಣ ಅಮೆರಿಕ, ಆಫ್ರಿಕ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ ದಂತಹ ತಂಡಗಳ ರಚನೆ ಆಯಿತು. ಈಗ ಭಾರತದ ಈ ಭೂಭಾಗ ಏಷ್ಯಾದ ಭಾಗವಾಗಿರಬಹುದು. ಆದರೆ 250 ಮಿಲಿಯನ್ ವರ್ಷಗಳ ಹಿಂದೆ ಭಾರತದ ಈ ಭೂಭಾಗ ಗೊಂಡ್ವಾನಾ ಮಹಾದ್ವೀಪದ ಭಾಗವಾಗಿತ್ತು. ಆಗ ಆಫ್ರಿಕ ಮತ್ತು ಭಾರತ ಅಕ್ಕ-ಪಕ್ಕ ಇದ್ದವು. ಆದರೆ ನಿಧಾನಕ್ಕೆ ಹಂತಹಂತವಾಗಿ ಭೂಮಿಯ ಗರ್ಭದಲ್ಲಿ ಟೆಕ್ಟಾನಿಕ್ ಪ್ಲೇಟ್ ಗಳ ಚಲನೆಯಿಂದಾಗಿ ಭಾರತ ಮತ್ತು ಆಫ್ರಿಕಾ ದೂರದೂರವಾಗಿ ಕಡೆಗೆ,ಈಗಿನ ಅಖಂಡ ಭಾರತ ಸೃಷ್ಟಿಯಾಯಿತು. ಆಗ ಉಂಟಾದ ಭೂಭಾಗಗಳ ಘರ್ಷಣೆಯಿಂದಾಗಿ ಹಿಮಾಲಯ ಪರ್ವತಶ್ರೇಣಿ ಸೃಷ್ಟಿಯಾಯಿತು. ಈ ಪ್ರಕ್ರಿಯೆ ನಡೆಯಲು ಕೋಟ್ಯಾಂತರ ವರ್ಷಗಳ ಸಮಯ ಹಿಡಿದಿದೆ. ವಿಜ್ಞಾನಿಗಳ ಪ್ರಕಾರ ಇವತ್ತಿಗೂ ಭಾರತ ಇಂಚಿಂಚಾಗಿ ಉತ್ತರದ ಕಡೆ ಮೂವ್ ಆಗ್ತಾ ಇದೆ. ಇದರ ಪರಿಣಾಮವಾಗಿ ಪ್ರತಿವರ್ಷವೂ ಭಾರತ ಕೆಲವು ಇಂಚುಗಳಷ್ಟು ಭೂಮಿಯನ್ನು ಕಳೆದುಕೊಳ್ಳುತ್ತಿದೆ.. ಅದರ ಪರಿಣಾಮವಾಗಿ ಮೌಂಟ್ ಎವರೆಸ್ಟ್ ಸೇರಿದಂತೆ ಹಿಮಾಲಯದ ಎಲ್ಲ ಪರ್ವತಗಳ ಎತ್ತರ ಇಂಚಿಂಚಾಗಿ ಜಾಸ್ತಿಯಾಗುತ್ತಿದೆ.

ವಿಜ್ಞಾನಿ ಆಲ್ಫ್ರೆಡ್ ವ್ಯಾಗ್ನರ್ ಪ್ರಕಾರ ಇವಾಗಲು ಹೇಗಾದರೂ ಮಾಡಿ ಭೂಮಿಯ ಮೇಲಿರುವ ಅಷ್ಟು ಭೂಭಾಗಗಳನ್ನು ಎಳೆದುತಂದು ಒಟ್ಟಿಗೆ ಸೇರಿಸಲು ಸಾಧ್ಯವಾದರೆ ಪ್ಯಾಂಜಿಯಾ ಮಹಾದ್ವೀಪ ನಿರ್ಮಾಣವಾಗುತ್ತದೆ. ಆದರೆ ಪ್ರಾಕ್ಟಿಕಲಿ ಇದು ಸಾಧ್ಯವಿಲ್ಲ ಬಿಡಿ.

ಇನ್ನು ಫ್ರೆಂಡ್ಸ್ ಇಂತಹ ಭೂಮಿಯ ಚಲನೆಯಿಂದಾಗಿ ಜ್ವಾಲಾಮುಖಿ ಮತ್ತು ಭೂಕಂಪದ ಅಪಾಯ ಇರುತ್ತದೆ. ಭಾರತದಲ್ಲಂತೂ ಯಾವುದೇ ಸಕ್ರಿಯ ಜ್ವಾಲಾಮುಖಿ ಇಲ್ಲ. ಆದರೆ ಹಿಮಾಲಯದ ಸುತ್ತಮುತ್ತಲ ಈ ಪ್ರದೇಶದಲ್ಲಿ ಭೂಕಂಪನದ ಅನುಭವ ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ ಅನ್ನೋದನ್ನ ನಾವು ನೆನಪಿಸಿಕೊಳ್ಳಬಹುದು. ಸೋ ಫ್ರೆಂಡ್ಸ್ ಇದಾಗಿತ್ತು ಭಾರತ ಹೇಗೆ ಈಗಿರುವ ಆಕಾರವನ್ನು ಪಡೆದುಕೊಳ್ತು ಅನ್ನೋದರ ಬಗ್ಗೆ ನಿಮಗೆ ತಿಳಿಸುವ ಪ್ರಯತ್ನ. ಜೊತೆಜೊತೆಗೆ 7ಖಂಡಗಳ ನಿರ್ಮಾಣ ಹೇಗೆ ಆಯ್ತು ಅಂತ ನಿಮಗೆ ಅರ್ಥ ಮಾಡಿಸುವ ಪ್ರಯತ್ನ.

 

Contact Us for Advertisement

Leave a Reply