ಇಂಡೋನೇಷ್ಯಾದಲ್ಲಿ ಭೂಕಂಪ..! ಆದರೂ ಪವಾಡ..!

ಇಂಡೋನೇಷ್ಯಾದಲ್ಲಿಂದು ಪ್ರಬಲ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲಾಗಿದೆ. ಪೂರ್ವ ಇಂಡೋನೇಷ್ಯಾದ ಮಲುಕು ದ್ವೀಪ ಪ್ರದೇಶದ 37 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, 29 ಕಿ.ಮೀ. ಆಳದಲ್ಲಿ ಕಂಪನವಾಗಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ. ಕಳೆದ ವರ್ಷ 7.5ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಸೃಷ್ಟಿಯಾಗಿ ಸುಮಾರು 4,300 ಜನರು ಸಾವೀಗೀಡಾಗಿದ್ದರು. ನಿನ್ನೆಯಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿ 37 ಮಂದಿ ಸಾವನ್ನಪಿದ್ರೆ, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ವಿಚಿತ್ರ ಅಂದ್ರೆ ಇಂಡೋನೇಷ್ಯಾದಲ್ಲಿ ಈ ಬಾರಿ 6.5 ತೀವ್ರತೆಯ ಭೂಕಂಪ ಸಂಭವಿಸಿದ್ರೂ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ.

Contact Us for Advertisement

Leave a Reply