ಭೂಮಿಯ ಒಳ ಪದರದ ತಿರುಗುವಿಕೆ ಸ್ಟಾಪ್! ಇದ್ರಿಂದ ಆಗುವ ಪರಿಣಾಮಗಳೇನು?

masthmagaa.com:

ಮನುಷ್ಯರು ಅಥವಾ ಜೆನರಲ್‌ ಆಗಿ ಜೀವಿಗಳು ವಾಸಿಸೋಕೆ ಯೋಗ್ಯವಾಗಿರೋ ಏಕೈಕ ಗ್ರಹ ಅಂದ್ರೆ ಭೂಮಿ. ಭೂಮಿಯ ಮೇಲೆ ವಾಸಿಸೋ ನಮಗೆ ಅದರ ಒಳಗಡೆ ಏನೆಲ್ಲಾ ನಡಿಯುತ್ತೆ ಅನ್ನೊದು ಗೊತ್ತಾಗಲ್ಲ. ಭೂಮಿಯ ಒಳಗಡೆ ನಡಿಯೋ ಕೆಲ ಚಲನವಲನಗಳು ಕೂಡ ಭೂಮಿಯ ಮೇಲೆ ವಾಸಿಸೋ ಮನುಷ್ಯರ ಅನುಭವಕ್ಕೆ ಬರಲ್ಲ. ಭೂಕಂಪನ, ಜ್ವಾಲಾಮುಖಿ ಅಂತ ವಿದ್ಯಮಾನಗಳು ಸಂಭವಿಸಿದಾಗ ಮಾತ್ರ ಕೆಲ ಕಂಪನದ ಅನುಭವ ಆಗುತ್ತೆ. ಇದೀಗ ಭೂಮಿಯ ಇನ್ನರ್‌ ಕೋರ್‌ ಅಥ್ವಾ ಒಳಭಾಗ ತನ್ನ ತಿರುಗವಿಕೆಯನ್ನ ನಿಲ್ಲಿಸಿದೆ. ಅಲ್ದೇ ಮೊದಲಿದ್ದ ತಿರುಗುವಿಕೆಯ ದಿಕ್ಕನ್ನ ಬದಲಾಯಿಸಿದೆ ಅಂತ ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಈ ಮಾಹಿತಿಯನ್ನ ನೇಚರ್‌ ಜಿಯೋಸೈನ್ಸ್‌ ಜರ್ನಲ್‌ನಲ್ಲಿ ಪಬ್ಲಿಷ್‌ ಮಾಡಲಾಗಿದೆ. ಭೂಮಿಯ ಇನ್ನರ್‌ ಕೋರ್‌ನಲ್ಲಿ ಸಂಭವಿಸಿರೋ ಈ ಬದಲಾವಣೆ ನಿನ್ನೆ, ಮೊನ್ನೆ ಆಗಿದ್ದಲ್ಲ. 2009ರಲ್ಲೇ ಅದರ ರೊಟೇಶನ್‌ ಸ್ಟಾಪ್‌ ಆಗಿದೆ. ಹಾಗೂ ತಾನು ಮೊದಲು ತಿರುಗುತ್ತಿದ್ದ ದಿಕ್ಕಿಗೆ ವಿರುದ್ದವಾಗಿ ಅಂದ್ರೆ ಉದಾಹರಣೆಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿತ್ತಿದ್ರೆ ಇದೀಗ ಅದರ ವಿರುದ್ದ ದಿಕ್ಕಿನಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ರೊಟೇಟ್‌ ಆಗ್ತಿದೆ ಅಂತ ಸಂಶೋಧನಾಕಾರರು ಹೇಳಿದ್ದಾರೆ. ಆದ್ರೆ ಇದರ ತಿರುಗುವಿಕೆ ರೌಂಡ್‌ ಆಗಿರದೇ ಬ್ಯಾಕ್‌ ಆಂಡ್‌ ಫೋರ್ತ ಮೋಷನ್‌ನಲ್ಲಿ ಅಂದ್ರೆ ಸ್ವಿಂಗ್‌ ರೀತಿ ಆಗುತ್ತೆ ಅಂತ ಹೇಳಲಾಗಿದೆ. ಇನ್ನು ಈ ರೀತಿ ಒಂದು ಪೂರ್ಣ ಸ್ವಿಂಗ್‌ಗೆ ಬರೋಬ್ಬರಿ 70 ವರ್ಷ ತೆಗೆದುಕೊಳ್ಳುತ್ತೆ. ಹಾಗೂ ಅದರ ದಿಕ್ಕನ್ನ ಅಂದಾಜು 35 ವರ್ಷಗಳಿಗೊಮ್ಮೆ ಚೇಂಜ್‌ ಮಾಡ್ತಿರುತ್ತೆ. ಕೊನೆಯ ಬಾರಿ 1970ರಲ್ಲಿ ಚೇಂಜ್‌ ಆಗಿತ್ತು. ಹಾಗೂ ಮುಂದಿನ ಬದಲಾವಣೆ 2040ರ ಸಮಯದಲ್ಲಿ ಆಗಬಹುದು ಅಂತ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇನ್ನು ಈ ಬದಲಾವಣೆಯಿಂದ ಭೂಮಿ ತನ್ನ ಸುತ್ತ ಸುತ್ತೋಕೆ ಅಂದ್ರೆ ದೈನಂದಿನ ಚಲನೆಗೆ ತೆಗೆದುಕೊಳ್ಳುವ ಟೈಮಲ್ಲಿ ಸಣ್ಣ ಬದಲಾವಣೆಗಳು ಆಗಬಹುದು. ಆದ್ರೆ ಇದ್ರಿಂದ ಭೂಮಿ ಮೇಲೆ ವಾಸ ಮಾಡ್ತಿರೋ ಜನರ ಜೀವನದ ಮೇಲೆ ಪರಿಣಾಮ ಬೀಳುತ್ತಾ ಇಲ್ವಾ ಅನ್ನೊದಕ್ಕೆ ಯಾವುದೇ ಸಾಕ್ಷ್ಯ ದೊರಕಿಲ್ಲ ಅಂತ ಸಂಶೋಧನಕಾರರು ಹೇಳಿದ್ದಾರೆ. ಅಂದ್ಹಾಗೆ ಭೂಮಿ ಒಟ್ಟು 3 ಪದರುಗಳಿಂದ ಆಗಿದೆ. ಮೇಲ್ಪದರ ಕ್ರಸ್ಟ್‌, ಮಧ್ಯ ಪದರ ಮ್ಯಾಂಟಲ್‌ ಹಾಗೂ ಒಳ ಪದರ ಕೋರ್‌ ಅನ್ನೊ ಮೂರು ಭಾಗಗಳಿವೆ. ಇವಾಗ ಬದಲಾವಣೆ ಕಂಡು ಬಂದಿರೋದು ಒಳ ಪದರ ಕೋರ್‌ನಲ್ಲಿ. ಈ ಕೋರ್‌ನ್ನ ಮೊದಲು 1936ರಲ್ಲಿ ಕಂಡು ಹಿಡಿಯಲಾಗಿತ್ತು. ಇದು 7000 ಕಿಲೋ ಮೀಟರ್‌ ಅಗಲವಿದ್ದು, ಐರನ್‌ ಅಥ್ವಾ ಕಬ್ಬಿಣದ ಮಿನರಲ್‌ನಿಂದ ಮಾಡಲ್ಪಟ್ಟಿದೆ.

-masthmagaa.com

Contact Us for Advertisement

Leave a Reply