ಬಂಡೆ ಬ್ರದರ್‍ಗೂ ಸಂಕಷ್ಟ ಶುರು..! ಡಿ.ಕೆ ಸುರೇಶ್‍ಗೆ ಇಡಿ ನೋಟಿಸ್..!

ಅಕ್ರಮ ಹಣ ವರ್ಗಾವಣೆ ಕೇಸ್‍ನಲ್ಲಿ ಡಿ.ಕೆ ಶಿವಕುಮಾರ್ ಜೈಲುಪಾಲಾಗಿದ್ದಾರೆ. ಈಗ ಅವರ ಸಹೋದರ ಡಿ.ಕೆ.ಸುರೇಶ್‍ಗೂ ಜಾರಿ ನಿರ್ದೇಶನಾಲಯ ನೋಟಿಸ್ ಕೊಟ್ಟಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 338 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಇನ್ನು ತಂದೆ ಕೆಂಪೇಗೌಡ ಆಸ್ತಿ ಕೂಡ ಡಿ.ಕೆ ಸುರೇಶ್ ಹೆಸರಿಗೆ ವರ್ಗಾವಣೆಯಾಗಿತ್ತು. ಇನ್ನು ಡಿ.ಕೆ.ಶಿವಕುಮಾರ್ ಪುತ್ರಿಗೆ ಡಿ.ಕೆ.ಸುರೇಶ್ ಭಾರಿ ಮೊತ್ತದ ಸಾಲ ಕೊಟ್ಟಿದ್ದಾರೆ. ಹೀಗಾಗಿ ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಕೊಟ್ಟಿದೆ.

Contact Us for Advertisement

Leave a Reply