ಇಂದು ಸಂಜೆ ‘ಪಂಚರಾಜ್ಯ’ಗಳ ಚುನಾವಣೆ ದಿನಾಂಕ ಘೋಷಣೆ

masthmagaa.com:

ತಮಿಳುನಾಡು, ಕೇರಳ, ಪುದುಚೆರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆ ದಿನಾಂಕ ಇವತ್ತು ಅನೌನ್ಸ್ ಆಗಲಿದೆ. ಕೇಂದ್ರ ಚುನಾವಣಾ ಆಯೋಗ ಸಂಜೆ 4.30ಕ್ಕೆ ಸುದ್ದಿಗೋಷ್ಠಿ ಆಯೋಜಿಸಿದೆ. ಈ ವೇಳೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಏಪ್ರಿಲ್​-ಮೇ ತಿಂಗಳಲ್ಲಿ ಎಲೆಕ್ಷನ್ ನಡೆಯೋ ಸಾಧ್ಯತೆ ಇದೆ. ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಭೀತಿ ಇದೆ. ಇಂತಹ ಸಂದರ್ಭದಲ್ಲೇ ಚುನಾವಣೆ ಕೂಡ ಬರ್ತಿದೆ. ಕಳೆದ ವರ್ಷ ಕೊರೋನಾ ಕರಿ ನೆರಳಿನ ನಡುವೆಯೇ ಬಿಹಾರ ವಿಧಾನಸಭೆ ಚುನಾವಣೆ ನಡೆದಿತ್ತು.

ಇನ್ನು ರಾಜ್ಯದ ಬಸವಕಲ್ಯಾಣ, ಮಸ್ಕಿ, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಕೂಡ ಇವತ್ತೇ ಅನೌನ್ಸ್ ಆಗುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply