ಉದ್ಯೋಗಿಗಳನ್ನ ಮತ್ತೆ ತೆಗೆದು ಹಾಕಿದ ಟ್ವಿಟರ್!

masthmagaa.com:

ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ ಒಡೆನತಕ್ಕೆ ಬಂದ್ಮೇಲೆ ಟ್ವಿಟರ್‌ ಅಲ್ಲೋಲ ಕಲ್ಲೋಲ ಆಗಿದೆ. ದಿನಕ್ಕೊಂದು ರೂಲ್ಸ್‌, ಕ್ಷಣಕ್ಕೊಂದು ಬದಲಾವಣೆ ಆಗ್ತಿವೆ. ಇತ್ತೀಚೆಗೆ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನ ಕೆಲಸದಿಂದ ಮಸ್ಕ್‌ ತೆಗೆದು ಹಾಕಿದ್ರು. ಈಗ ಮತ್ತೆ ಸೇಲ್ಸ್‌ ವಿಭಾಗಕ್ಕೆ ಸೇರಿದ್ದ ಉದ್ಯೋಗಿಗಳನ್ನ ವಜಾ ಮಾಡಲಾಗಿದೆ ಅಂತ ಮೂಲಗಳು ತಿಳಿಸಿವೆ. ಆದ್ರೆ ಈ ಸಲ ಜಾಬ್ಸ್‌ ಕಟ್‌ನಲ್ಲಿ ಎಷ್ಟು ಜನ ಉದ್ಯೋಗಿಗಳನ್ನ ತೆಗೆದು ಹಾಕಿದ್ದಾರೆ ಅನ್ನೋದು ತಿಳಿದುಬಂದಿಲ್ಲ.‌ ಇತ್ತ ಟ್ವಿಟರ್‌ನ ಫ್ರಾನ್ಸ್‌ ಮುಖ್ಯಸ್ಥ ರಾಜಿನಾಮೆ ನೀಡೋದಾಗಿ ಹೇಳಿದ್ದಾರೆ. ಮತ್ತೊಂದ್‌ ಕಡೆ ಟ್ವಿಟರ್‌ನಲ್ಲಿ ಫೇಕ್‌ ಅಕೌಂಟ್‌ಗಳ ಹಾವಳಿ ಜಾಸ್ತಿ ಆಗ್ತಿದೆ. ಈ ಹಿನ್ನೆಲೆಯಲ್ಲಿ ವೆರಿಫೈಡ್‌ ಬ್ಲ್ಯೂ ಟಿಕ್‌ ಫೀಚರ್‌ನ್ನ ಫೇಕ್‌ ಅಕೌಂಟ್‌ ಸಮಸ್ಯೆ ಬಗೆಹರಿಯೋವರೆಗೆ ರೀಲಾಂಚ್‌ ಮಾಡಲ್ಲ ಅಂತ ಮಸ್ಕ್‌ ಹೇಳಿದ್ದಾರೆ. ಇತ್ತೀಚೆಗೆ ಬ್ಲ್ಯೂ ಟಿಕ್‌ ವೆರಿಫಿಕೇಶನ್‌ ಪಡೆಯೋಕೆ 8 ಡಾಲರ್‌ ಅಂದ್ರೆ ಸುಮಾರು 656 ರೂಪಾಯಿ ಪಾವತಿಸಬೇಕು ಅಂತ ಮಸ್ಕ್‌ ಹೇಳಿದ್ರು.

-masthmagaa.com

Contact Us for Advertisement

Leave a Reply