ಪುಲ್ಬಾಲ್‌ ತಂಡವನ್ನ ಖರೀದಿ ಮಾಡ್ತೀನಿ ಅಂತ ಹಲ್‌ ಚಲ್‌ ಸೃಷ್ಠಿಸಿದ ನಂ1 ಕುಬೇರ ಮಸ್ಕ್‌!

masthmagaa.com:

ಟ್ವಿಟ್ಟರ್‌ ಖರೀದಿ ಮಾಡ್ತೀನಿ ಅಂತ ಹಾವು ಏಣಿ ಆಟ ಆಡ್ತಿರೋ ವಿಶ್ವದ ನಂ. 1 ಶ್ರೀಮಂತ ಎಲಾನ್‌ ಮಸ್ಕ್‌ ಈಗ ಪುಟ್ಬಾಲ್‌ ಕ್ಷೇತ್ರದಲ್ಲೂ ಕೂಡ ಟ್ಟೀಟ್‌ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ. ಇಂಗ್ಲೆಂಡ್‌ನ ಗ್ರೇಟರ್‌ ಮ್ಯಾಂಚೆಸ್ಟರ್‌ ಮೂಲದ ಶ್ರೀಮಂತ ಫೂಟ್‌ಬಾಲ್‌ ಕ್ಲಬ್‌ ʻಮ್ಯಾಂಚೆಸ್ಟರ್‌ ಯುನೈಟೆಡ್‌ನ್ನʼ ಖರೀದಿ ಮಾಡೋದಾಗಿ ಎಲಾನ್‌ ಮಸ್ಕ್‌ ಅನೌನ್ಸ್‌ ಮಾಡಿದ್ರು. ಬಳಿಕ ಇದೆಲ್ಲಾ ತಮಾಷೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಟ್ವೀಟ್‌ ಮಾಡಿದ್ದ ಮಸ್ಕ್, “ನಾನು ಮ್ಯಾಂಚೆಸ್ಟರ್ ಯುನೈಟೆಡ್‌ನ್ನು ಖರೀದಿಸುತ್ತಿದ್ದೇನೆ, ನಿಮಗೆ ಸ್ವಾಗತ,” ಅಂತ ಹೇಳಿದ್ರು. ಆ ಬಳಿಕ ಮತ್ತೊಂದು ಟ್ವೀಟ್‌ ಮಾಡಿ ʻಇಲ್ಲ..ಇಲ್ಲ ಇದೆಲ್ಲ ತಮಾಷೆ.. ಇದು ಟ್ವಿಟರ್‌ನಲ್ಲಿ ದೀರ್ಘಕಾಲದಿಂದ ಇರೋ ಜೋಕ್‌. ನಾನು ಯಾವುದೇ ಸ್ಪೋಟ್ಸ್‌ ಟೀಂಗಳನ್ನ ಖರೀದಿ ಮಾಡ್ತಿಲ್ಲ ಅಂತ ಹೇಳಿದ್ದಾರೆ. ಆದ್ರೆ ಮಸ್ಕ್‌ರ ಈ ಟ್ವೀಟ್‌ ವಿಶ್ವದ ಪುಟ್ಬಾಲ್‌ ಕ್ಷೇತ್ರದಲ್ಲಿ ಹಲ್‌ ಚಲ್‌ ಸೃಷ್ಠಿ ಮಾಡಿತ್ತು. ಪ್ರಸ್ತುತ ಶ್ರೀಮಂತ, ಐತಿಹಾಸಿಕ ಪುಟ್ಬಾಲ್‌ ಕ್ಲಬ್‌ ಆಗಿರೋ ʻಮ್ಯಾಂಚೆಸ್ಟರ್ ಯುನೈಟೆಡ್ʼ ಅಮೆರಿಕದ ಗ್ಲೇಜರ್ ಕುಟುಂಬದ ನಿಯಂತ್ರಣದಲ್ಲಿದೆ. ಆದ್ರೆ ಮಸ್ಕ್‌ ಟ್ವೀಟ್‌ ಆಟಗಳ ಕುರಿತು ಆ ಕುಟುಂಬದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನು ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶ ಅಂದ್ರೆ ಈಗ ಈ ಪುಟ್ಬಾಲ್‌ ಕ್ಲಬ್‌ನ ಈಗಿನ ಟೈಂ ಸರಿಯಿಲ್ಲ ಅಂತಾನೇ ಹೇಳ್ಬೋದು. ಯಾಕಂದ್ರೆ ಮ್ಯಾಂಚೆಸ್ಟರ್ ಯುನೈಟೆಡ್ ಅಭಿಮಾನಿಗಳು ಇತ್ತೀಚಿನ ವರ್ಷಗಳಲ್ಲಿ ಈ ಗ್ಲೇಜರ್ಸ್ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸ್ತಾನೇ ಬರ್ತಿದ್ದಾರೆ. ಕ್ಲಬ್ ಅನ್ನ 2005ರಲ್ಲಿ 955.51 ಮಿಲಿಯನ್ ಡಾಲರ್‌ಗೆ ಗ್ಲೇಜರ್‌ ಕುಟುಂಬ ಖರೀದಿ ಮಾಡಿತ್ತು. ಇದಾದ ಬಳಿಕ ಕ್ಲಬ್‌ ಹೇಳಿಕೊಳ್ಳುವಂತ ಯಾವುದೇ ಸಾಧನೆ ಮಾಡಿಲ್ಲ. ಫುಟ್‌ಬಾಲ್‌ ಲೀಗ್‌ಗಳಲ್ಲಿ ಹೀನಾಯ ಪ್ರದರ್ಶನ ನೀಡ್ತಾನೇ ಬಂದಿದೆ. ಅದರಲ್ಲೂ ಕಳೆದ ವರ್ಷ ಯುರೋಪಿಯನ್‌ ಸೂಪರ್ ಲೀಗ್‌ಗೆ ಅರ್ಹತೆ ಪಡೆಯೋಕೆ ಕೂಡ ಈ ಕ್ಲಬ್‌ ವಿಫಲವಾಗಿತ್ತು. ಆಗ ಈ ಕ್ಲಬ್‌ನ ಅಭಿಮಾನಿಗಳು ಗ್ಲೇಜರ್ ಕುಟುಂಬದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ರು. ಇಂತಹ ಸಂದರ್ಭದಲ್ಲೇ ಮಸ್ಕ್‌ ಈ ಟ್ವೀಟ್‌ ಆಟ ಆಡಿದ್ದಾರೆ.

-masthmagaa.com

Contact Us for Advertisement

Leave a Reply