ಮಸ್ಕ್‌ Vs ಆ್ಯಪಲ್‌: ಆ್ಯಪಲ್‌ ವಿರುದ್ದ ಹಲವು ಆರೋಪ ಮಾಡಿದ ಮಸ್ಕ್

masthmagaa.com:

ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ ಆ್ಯಪಲ್‌ ಕಂಪನಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ಆ್ಯಪಲ್‌ ಯಾವುದೇ ಕಾರಣ ನೀಡದೇ ತನ್ನ ಆ್ಯಪ್‌ ಸ್ಟೋರ್‌ನಿಂದ ಟ್ವಿಟರ್‌ನ್ನ ಬ್ಲಾಕ್‌ ಮಾಡುತ್ತೆ ಅಂತ ಬೆದರಿಕೆ ನೀಡಿದೆ ಅಂತ ಮಸ್ಕ್‌ ಕಿಡಿಕಾರಿದ್ದಾರೆ. ಜೊತೆಗೆ ಈ ಐಫೋನ್‌ ಉತ್ಪಾದಕ ಕಂಪನಿ, ಟ್ವಿಟರ್‌ನಲ್ಲಿ ಜಾಹೀರಾತುಗಳನ್ನ ಕೂಡ ಸ್ಟಾಪ್‌ ಮಾಡಿದೆ. ಟ್ವಿಟರ್‌ನ ಕಟೆಂಟ್‌ ಮಾಡಿಫಿಕೇಶನ್‌ಗಳ ಮೇಲೆ ಅಂದ್ರೆ ಬಳಕೆದಾರರು ಪೋಸ್ಟ್‌ ಮಾಡಿದ್ದನ್ನ ಪರಿಶೀಲನೆ ಮಾಡೋದು ಹಾಗೂ ಅನಾವಶ್ಯಕ ಪೋಸ್ಟ್‌ಗಳನ್ನ ಡಿಲೀಟ್‌ ಮಾಡೋದ್ರ ಕುರಿತು ಆ್ಯಪಲ್‌ ಒತ್ತಡ ಹೇರ್ತಿದೆ ಅಂತ ಮಸ್ಕ್‌ ಆರೋಪಿಸಿದ್ದಾರೆ. ಜೊತೆಗೆ ಆ್ಯಪಲ್‌ನ ಆ್ಯಪ್‌ ಸ್ಟೋರ್‌ನಿಂದ ನೀವು ಏನೇ ಖರೀದಿ ಮಾಡಿದ್ರು, 30% ಸಿಕ್ರೇಟ್‌ ಟ್ಯಾಕ್ಸ್‌ ಹಾಕ್ತಾರೆ ಅಂತ ಮಸ್ಕ್‌ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಆ್ಯಪಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply