ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಿದ ಬ್ರೆಜಿಲ್‌! ಯಾಕೆ?

masthmagaa.com:

ಅಪೌಷ್ಟಿಕತೆ ಹಾಗೂ ಇತರ ಖಾಯಿಲೆಗಳಿಂದ ಬ್ರೆಜಿಲ್‌ನಲ್ಲಿ ಮಕ್ಕಳ ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಈ ಹಿನ್ನಲೆಯಲ್ಲಿ ಅಲ್ಲಿನ ಆರೋಗ್ಯ ಸಚಿವಾಲಯ ವೈದ್ಯಕೀಯ ತುರ್ತು ಪರಿಸ್ಥಿತಿ ಅನೌನ್ಸ್‌ ಮಾಡಿದೆ. ಬ್ರೆಜಿಲ್‌ ಮತ್ತು ವೆನೆಜುವೆಲಾ ಗಡಿ ಪ್ರದೇಶದಲ್ಲಿರೋ ಯನೊಮಾಮಿ ಬುಡಕಟ್ಟಿಗೆ ಸೇರಿದ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ತಿದಾರೆ. ಇದಕ್ಕೆ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ಕಾರಣ ಅಂತ ಅಧ್ಯಕ್ಷ ಲುಲಾ ಆರೋಪಿಸಿದ್ದಾರೆ. ಬೋಲ್ಸೊನಾರೊ ಅವಧಿಯಲ್ಲಿ ಈ ಜನರಿಗೆ ಆರೋಗ್ಯ ಸೇವೆಗಳನ್ನ ನೀಡೋದನ್ನ ನಿಲ್ಲಿಸಲಾಗಿತ್ತು. ಹಾಗಾಗಿ ಈ ಸಮಸ್ಯೆ ಎದುರಾಗಿದೆ ಅಂತ ಆರೋಪ ಮಾಡಿದ್ದಾರೆ. ಅಲ್ದೇ ಲುಲಾ ಅವ್ರು ಯನೊಮಾಮಿ ಹೆಲ್ತ್‌ ಸೆಂಟರ್‌ಗೆ ಭೇಟಿ ನೀಡಿದ್ದಾರೆ. ಈ ಸಮುದಾಯದ ವಿರುದ್ಧ ಅಪರಾಧ ಮಾಡಿರೋ ಹಿಂದಿನ ಸರ್ಕಾರ ಸಾಮೂಹಿಕ ಹತ್ಯೆ ಮಾಡಿದೆ ಅಂತ ಆರೋಪಿಸಿದ್ದಾರೆ. ಇದೇ ವೇಳೆ ಈ ಸಮಸ್ಯೆಯನ್ನ ಬಗೆಹರಿಸಲು ಈ ಪ್ರದೇಶದಲ್ಲಿ ವೈದ್ಯಕೀಯ ಸೇವೆಗಳನ್ನ ಪುನಃಸ್ಥಾಪನೆ ಮಾಡೋದು ನಮ್ಮ ಗುರಿ ಅಂತ ಹೇಳಿದ್ದಾರೆ. ಯನೊಮಾಮಿ ಬುಡಕಟ್ಟು ಸಮುದಾಯದ ಜನರಿಗೆ ಆಹಾರ ಪ್ಯಾಕೇಜ್‌ನ್ನ ಅನೌನ್ಸ್‌ ಮಾಡಿದ್ದಾರೆ. ಅಂದ್ಹಾಗೆ ಬೋಲ್ಸೊನಾರೊ ಅವ್ರ ನಾಲ್ಕು ವರ್ಷ ಅವಧಿಯಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ, ಅಪೌಷ್ಟಿಕತೆ ಮತ್ತು ಮಲೇರಿಯಾ ಸೇರಿದಂತೆ ಇತರ ಖಾಯಿಲೆಗಳಿಂದ ಈ ಪ್ರದೇಶದಲ್ಲಿ ಸುಮಾರು 570 ಮಕ್ಕಳು ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply