ಮೂವರು ಉಗ್ರರ ಹತ್ಯೆ.. ಭಾರತೀಯ ಯೋಧರ ಸಾಹಸ

ಜಮ್ಮು ಕಾಶ್ಮೀರದ ಅನಂತನಾಗ್​ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ಪಝಲ್​​​ಪೋರಾದಲ್ಲಿ ಅಡಗಿರುವ ಉಗ್ರರನ್ನು ಯೋಧರು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಾಲಾಕೋಟ್​​ನಲ್ಲಿ ಉಗ್ರರು ಮತ್ತೆ ಆಕ್ಟೀವ್ ಆಗಿದ್ದು, ಗಡಿ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಮೊನ್ನೆಯಷ್ಟೇ ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದವು. ಅಲ್ಲದೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕಿತ್ತೆಸೆದ ಮೇಲೆ ಪಾಕ್ ಫುಲ್ ಉರಿದುಕೊಂಡಿದೆ. ಹೀಗಾಗಿ ಉಗ್ರರನ್ನು ಗಡಿ ಹತ್ತಿರ ತಂದಿಟ್ಟುಕೊಂಡು ಭಾರತದೊಳಗೆ ನುಸುಳಿಸಲು ಯತ್ನಿಸುತ್ತಿದೆ. ಇನ್ನೊಂದು ವಿಷ್ಯ ಅಂದ್ರೆ ಅದಕ್ಕೆ ಪಾಕಿಸ್ತಾನ  ಸೇನೆಯೇ ಸಾಥ್ ನೀಡುತ್ತಿದೆ.

Contact Us for Advertisement

Leave a Reply