ಅನರ್ಹ ಶಾಸಕರು ಬಿಜೆಪಿಯ ಅಳಿಯರಿದ್ದಂತೆ: ಈಶ್ವರಪ್ಪ

ಅನರ್ಹ ಶಾಸಕರು ಒಂದು ರೀತಿ ಬಿಜೆಪಿಯ ಮನೆ ಅಳಿಯಂದಿರಿದ್ದಂತೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದು ಎಂದು ತೀರ್ಪು ಕೊಟ್ಟರೆ, ಅವರ ನಮ್ಮ ಅಭ್ಯರ್ಥಿಗಲು ಅಂತ ಘೋಷಿಸಿದ್ದಾರೆ. ಆದ್ರೆ ಸುಪ್ರೀಂಕೋರ್ಟ್ ತೀರ್ಪು ಅನರ್ಹ ಶಾಸಕರಿಗೆ ವಿರುದ್ಧವಾಗಿ ಬಂದರೆ, ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ತೀವಿ. ಮನೆ ಮಕ್ಕಳು ಕಡಿಮೆ ಇರುವುದರಿಂದ ಅಳಿಯಂದಿರು ಬಂದಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯನವರು ವಿಪಕ್ಷದ ನಾಯಕರಾಗಲು ಸಾಧ್ಯವಾಗದೇ ಸೋನಿಯಾ ಗಾಂಧಿ ಮನೆ ಬಾಗಿಲು ತಟ್ಟಿದ್ದಾರೆ. ದೋಸ್ತಿಸರ್ಕಾರ ಇದ್ದಾಗ ಒಳಗೊಳಗೆ ಬಡಿದಾಡುತಿದ್ದ ಜೆಡಿಎಸ್-ಕಾಂಗ್ರೆಸ್ ಈಗ ಮುಖಾಮುಖಿಯಾಗಿ ಬಡಿದಾಡುತ್ತಿವೆ ಎಂದು ಕಾಂಗ್ರೆಸ್ ಜೆಡಿಎಸ್ ವಿರುದ್ಧವೂ ಕೆಂಡಕಾರಿದ್ದಾರೆ.

Contact Us for Advertisement

Leave a Reply