ನಾಳೆ ಕೋರ್ಟ್‍ನಲ್ಲಿ ಏನಾಗುತ್ತೆ ನೋಡಿ..! ಈಶ್ವರಪ್ಪ ಮಾತಿನ ಅರ್ಥವೇನು..?

ಅನರ್ಹ ಶಾಸಕರ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ನಾಳೆ ಏನಾಗುತ್ತೆ ನೋಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಎಲ್ಲರೂ ತಮಗೆ ಒಳ್ಳೆಯದೇ ಆಗಬೇಕೆಂದು ಬಯಸುತ್ತಾರೆ. ಈ ಹಿಂದೆ ಸುಪ್ರೀಂಕೋರ್ಟ್ ಕೂಡ ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರಿಗೆ ಸೂಚಿಸಿತ್ತು. ಆದ್ರೆ ತಾನೇ ಸಂವಿಧಾನ ತಜ್ಞ ಅನ್ನೋ ರೀತಿ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಮಾತುಕೇಳಿ ಶಾಸಕರನ್ನು ಅನರ್ಹಗೊಳಿಸಿದ್ರು ಅಂತ ಹೇಳಿದ್ರು. ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ನಾಳೆ ಅರ್ಜಿ ವಿಚಾರಣೆ ನಡೆಯಲಿದೆ. ಅನರ್ಹರು ಸ್ಪರ್ಧೆ ಮಾಡಬಾರದು ಎಂದು ಚುನಾವಣಾ ಆಯೋಗ ಹೇಳಿದೆ. ಆದ್ರೆ ಸುಪ್ರೀಂಕೋರ್ಟ್ ಅನರ್ಹತೆಗೆ ತಡೆ ನೀಡಿದರೆ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ನಾಳೆ ಕೋರ್ಟ್‍ನಲ್ಲಿ ಏನಾಗುತ್ತೆ ನೋಡಿ ಎಂದು ಹೇಳಿದ್ದಾರೆ.

Contact Us for Advertisement

Leave a Reply