ಈ ದೇಶದಲ್ಲಿ ವರ್ಷದ 76 ದಿನ ಸೂರ್ಯ ಮುಳುಗೋದೇ ಇಲ್ಲ!

masthmagaa.com:

ನಮಗೆಲ್ಲಾ ಗೊತ್ತಿರೋ ಹಾಗೆ ಸಂಜೆಯಾಗ್ತಿದ್ದಂತೆ ಸೂರ್ಯ ಮುಳುಗ್ತಾನೆ. ಮರುದಿನ ಬೆಳಗ್ಗೆ ಉದಯಿಸ್ತಾನೆ. ಆದ್ರೆ ಸೂರ್ಯ ಮಧ್ಯರಾತ್ರಿವರೆಗೆ ಆಕಾಶದಲ್ಲಿದ್ದು, ಮುಳುಗಿ ಮತ್ತೆ 40 ನಿಮಿಷ ಬಿಟ್ಟು ಆಕಾಶಕ್ಕೆ ಏರಿದ್ರೆ ಹೇಗಿರುತ್ತೆ..? ಯೆಸ್​.. ಇದು ನಾರ್ವೆಯ ಉತ್ತರ ಭಾಗದಲ್ಲಿರೋ ಹ್ಯಾಮರ್​ಫೆಸ್ಟ್​ ನಗರದಲ್ಲಿ ನೋಡಲು ಸಿಗುತ್ತೆ. ಇಲ್ಲಿ ಮೇ ಮತ್ತು ಜೂನ್​​ನಲ್ಲಿ ಒಟ್ಟು 76 ದಿನ ರಾತ್ರಿ ಬರೀ 40 ನಿಮಿಷದ್ದಾಗಿರುತ್ತೆ.

ಅರೆ.. ಇದು ಹೇಗಪ್ಪಾ ಸಾಧ್ಯ ಅಂತ ನೀವು ಯೋಚಿಸ್ತಿರಬಹುದು. ಅದು ಅರ್ಥವಾಗ್ಬೇಕಾದ್ರೆ ಮೊದಲು ಖಗೋಳದ ಒಂದು ವಿಜ್ಞಾನವನ್ನು ತಿಳಿದುಕೊಳ್ಬೇಕು. ಸೂರ್ಯನ ಸುತ್ತ ಭೂಮಿ ಸುತ್ತುವಾಗ 23 ಡಿಗ್ರಿ ವಾರೆಯಾಗಿ ಚಲಿಸುತ್ತೆ. ಹೀಗೆ ವಾರೆಯಾಗಿ ಸುತ್ತುವಾಗ ಬೇಸಿಗೆಯಲ್ಲಿ ಭೂಮಿಯ ಆರ್ಕ್ಟಿಕ್​ ಪ್ರದೇಶದಲ್ಲಿ ಎನಿ ಟೈಂ ಬಿಸಿಲು ಬೀಳುತ್ತಲೇ ಇರುತ್ತೆ. ಯಾಕಂದ್ರೆ ಭೂಮಿ 23 ಡಿಗ್ರಿ ವಾರೆಯಾಗಿ ಇರೋದ್ರಿಂದ ಈ ಆರ್ಕ್ಟಿಕ್ ಪ್ರದೇಶ ಸೂರ್ಯನ ಕಡೆಗೇ ಮುಖ ಮಾಡಿರುತ್ತೆ. ಸೋ ಈ ಆರ್ಕ್ಟಿಕ್ ಪ್ರದೇಶದಲ್ಲೇ ನಾರ್ವೆ ಬರೋದ್ರಿಂದ ಸೂರ್ಯ ರಾತ್ರಿ 40 ನಿಮಿಷ ಮಾತ್ರವೇ ಮಾಯವಾಗ್ತಾನೆ.. ಇದನ್ನು ಪೋಲಾರ್ ಡೇ ಅಂತ ಕರೆಯಲಾಗುತ್ತೆ.

ಅದೇ ರೀತಿ ಚಳಿಗಾಲದಲ್ಲಿ ಇದು ಉಲ್ಟಾ ಆಗುತ್ತೆ. ಚಳಿಗಾಲದಲ್ಲಿ ಭೂಮಿ ತಿರುಗ್ತಾ ತಿರುಗ್ತಾ ಈ ಕಡೆ ಬರುತ್ತೆ. ಆಗ ಅಂದ್ರೆ ನವೆಂಬರ್​​ನಿಂದ ಜನವರಿವರೆಗೆ ಆರ್ಕ್ಟಿಕ್ ಪ್ರದೇಶ ಸೂರ್ಯನ ಕಡೆ ಮುಖ ಮಾಡಿರೋದಿಲ್ಲ. ಬದಲಾಗಿ ಅಂಟಾರ್ಕ್ಟಿಕ್ ಸರ್ಕಲ್ ಸೂರ್ಯನ ಕಡೆ ಮುಖ ಮಾಡಿರುತ್ತೆ. ನೋಡಿ ಈ ರೀತಿ.. ಆಗ ಅಂಟಾರ್ಕ್ಟಿಕ್ ಸರ್ಕಲ್​​ನಲ್ಲಿ ಯಾವಾಗಲೂ ಸೂರ್ಯನ ಬಿಸಿಲು ಬೀಳ್ತಾ ಇರುತ್ತೆ. ಆಗ ಆರ್ಕ್ಟಿಕ್​​ನಲ್ಲಿ ಸೂರ್ಯನ ಬಿಸಿಳು ಬೀಳೋದೇ ಇಲ್ಲ.. ಇಡೀ ದಿನ ಕತ್ತಲು ಕತ್ತಲೆಯಾಗಿ ಇರುತ್ತೆ. ಇದನ್ನು ಪೋಲಾರ್ ನೈಟ್ ಅಂತ ಕರೆಯಲಾಗುತ್ತೆ.

ಇಷ್ಟೆಲ್ಲಾ ಹೇಳಿದ್ಮೇಲೆ ಇಲ್ಲಿ ನಾರ್ವೇ ದೇಶದ ಬಗ್ಗೆ ಚೂರು ಹೇಳಲೇಬೇಕು. ಇದು ಯೋರೋಪಿನಲ್ಲಿ ಬರೋ ಒಂದು ಪುಟಾಣಿ ದೇಶ.. ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತೆ. ಪುಟಾಣಿ ದೇಶವಾಗಿದ್ರೂ ಕೂಡ ಶ್ರೀಮಂತ ದೇಶಗಳ ಬಗ್ಗೆ ಮಾತನಾಡುವಾಗ ಇದರ ಹೆಸರು ಕೂಡ ಬರುತ್ತೆ. ಇಲ್ಲಿನ ಜನ ಆರೋಗ್ಯ ಮತ್ತು ಆಹಾರಕ್ಕೆ ತುಂಬಾ ಹೆಚ್ಚಿನ ಮಹತ್ವ ನೀಡ್ತಾರೆ.

-masthmagaa.com

Contact Us for Advertisement

Leave a Reply