ಇವತ್ತು ಬೆಂಗಳೂರಲ್ಲಿ `ಹಸಿರು ಕ್ರಾಂತಿ’..!? ಟ್ರಾಫಿಕ್ ಜಾಮ್ ಪಕ್ಕಾ..!

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇವತ್ತು ರೈತರು ಬೀದಿಗೆ ಇಳಿಯಲಿದ್ದಾರೆ. ರೈತರು ಉತ್ತರ ಕರ್ನಾಟಕಕ್ಕೆ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ, ರೈತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಮತ್ತೊಂದು ವಿಷ್ಯ ಅಂದ್ರೆ ಇವತ್ತು ಜೆಡಿಎಸ್ ಕೂಡ ದೇವೇಗೌಡರ ನೇತೃತ್ವದಲ್ಲಿ ಹೋರಾಟಕ್ಕೆ ಇಳಿಯಲಿದೆ. ಜೆಪಿ ಭವನದಿಂದ ಜೆಪಿ ಪಾರ್ಕ್‍ವರೆಗೆ ಪ್ರತಿಭಟನೆ ನಡೆಸಲು ಪ್ಲಾನ್ ಮಾಡಿದ್ದಾರೆ.

ಇನ್ನು ಮಲ್ಲೇಶ್ವರಂ, ಮೆಜೆಸ್ಟಿಕ್, ವಿಧಾನಸೌಧ, ಕಾರ್ಪೊರೇಷನ್ ಸರ್ಕಲ್, ಆನಂದ್ ರಾವ್ ಸರ್ಕಲ್‍ನಲ್ಲಿ ಟ್ರಾಫಿಕ್ ಬಿಸಿ ತಟ್ಟಲಿದೆ. ಹೀಗಾಗಿ ಪೊಲೀಸರು ಹಲವು ಬದಲಿ ವ್ಯವಸ್ಥೆಗಳನ್ನು ವ್ಯವಸ್ಥೆ ಮಾಡಿದ್ದಾರೆ.

ಪ್ರವಾಹದಲ್ಲಿ ಬೆಳೆನಷ್ಟವಾದವರಿಗೆ ಎಕರೆಗೆ 25 ಸಾವಿರ ರೂಪಾಯಿಯಂತೆ ಪರಿಹಾರ, 10 ಲಕ್ಷ ವೆಚ್ಚದಲ್ಲಿ ಮನೆ, ಜೀವ ಬಿಟ್ಟವರ ಕುಟುಂಬಕ್ಕ ಎ25 ಲಕ್ಷ ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ರೈತರು ಬೀದಿಗೆ ಇಳಿಯಲಿದ್ದಾರೆ.

Contact Us for Advertisement

Leave a Reply