ಕೊರೋನಾ ಕಂಟ್ರೋಲ್ ಮಾಡಿದ್ದ ಈ ದೇಶದಲ್ಲಿ ಭಾರತದ ರೂಪಾಂತರಿ ವೈರಸ್ ಹಾವಳಿ

masthmagaa.com:

ಕೇವಲ 109 ಕೊರೋನಾ ಕೇಸ್​ ಮತ್ತು 2 ಸಾವಿನೊಂದಿಗೆ ಕೊರೋನಾವನ್ನ ಬಹುತೇಕ ಕಂಟ್ರೋಲ್​ ಮಾಡಿದ್ದ ಪೆಸಿಫಿಕ್​ ದ್ವೀಪ ರಾಷ್ಟ್ರವಾದ ಫಿಜಿಯಲ್ಲೀಗ ಭಾರತದ ರೂಪಾಂತರಿ ವೈರಾಣು ಪತ್ತೆಯಾಗಿದೆ. ಕ್ವಾರಂಟೈನ್​ ಕೇಂದ್ರದಲ್ಲಿದ್ದ 6 ಜನರಲ್ಲಿ ಭಾರತದ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರೋ ಅಲ್ಲಿನ ಸರ್ಕಾರ, ಭಾರತ, ಬ್ರೆಜಿಲ್​, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್​ನಲ್ಲಿನ ಕೊರೋನಾ ಸುನಾಮಿ ಪರಿಸ್ಥಿತಿ ತನ್ನ ದೇಶದಲ್ಲಿ ಸೃಷ್ಟಿಯಾಗದಂತೆ ತಡೆಯಲು ಫಿಜಿ ರಾಜಧಾನಿ ಸುವಾದಲ್ಲಿ 14 ದಿನಗಳ ಲಾಕ್​​ಡೌನ್​ ಘೋಷಿಸಿದೆ.

-masthmagaa.com

Contact Us for Advertisement

Leave a Reply