ಮತ್ತೊಬ್ಬ ಬಾಲಿವುಡ್ ನಟನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

masthmagaa.com:

ಬಾಲಿವುಡ್​ ನಟ ಆಸಿಫ್​ ಬಸ್ರಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾದ ಖಾಸಗಿ ಗೆಸ್ಟ್​ ಹೌಸ್​​ವೊಂದರಲ್ಲಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಅಂತ ಹೇಳಲಾಗ್ತಿದೆ. ಆದ್ರೆ ಯಾವುದನ್ನೂ ಈಗಲೇ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಸುಶಾಂತ್ ಸಿಂಗ್ ರಜಪೂತ್​ ಅವರ ಮೃತದೇಹ ಕೂಡ ಇದೇ ವರ್ಷದ ಜೂನ್ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಇದೊಂದು ಕೊಲೆ ಅಂತ ಹೇಳಿ, ಇದೀಗ ಸಿಬಿಐ ತನಿಖೆ ಕೂಡ ನಡೆಯುತ್ತಿದೆ. ಅಂದ್ಹಾಗೆ ಆಸಿಫ್ ಬಸ್ರಾ ಅವರು ಸುಶಾಂತ್ ಸಿಂಗ್ ರಜಪೂತ್ ನಟನೆಯ ‘ಕೈ ಪೋ ಚೆ’ ಸಿನಿಮಾ ಸೇರಿದಂತೆ ‘ಒನ್ಸ್ ಅಪಾನ್​ ಎ ಟೈಮ್ ಇನ್ ಮುಂಬೈ’ ಮತ್ತು ಇತ್ತೀಚೆಗೆ ಬಿಡುಗಡೆಯಾದ ‘ಪಾತಾಳ್ ಲೋಕ್’, ‘ಹೊಸ್ಟೇಜಸ್ ಸೀಸನ್-2’ ಮುಂತಾದ ವೆಬ್ ಸಿರೀಸ್​ಗಳಲ್ಲಿ ನಟಿಸಿದ್ದರು.

-masthmagaa.com

Contact Us for Advertisement

Leave a Reply