masthmagaa.com:

ಬಾಲಿವುಡ್​ ಸಿನಿಮಾ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾ ಅವರ ಪತ್ನಿ ಶಬಾನಾ ಸಯೀದ್​ ಅವರನ್ನ ಎನ್​ಸಿಬಿ (Narcotics Control Bureau) ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮುಂಬೈನ ಜುಹುನಲ್ಲಿದ್ದಅವರ ನಿವಾಸದ ಮೇಲೆ ಇವತ್ತು ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ 10 ಗ್ರಾಂನಷ್ಟು ಗಾಂಜಾ ಸಿಕ್ಕಿದೆ. ಈ ಹಿನ್ನೆಲೆ ಎನ್​ಡಿಪಿಎಸ್ (Narcotic Drugs and Psychotropic Substances)​ ಕಾಯ್ದೆ ಅಡಿಯಲ್ಲಿ ಶಬಾನಾ ಸಯೀದ್​ರನ್ನ ಬಂಧಿಸಲಾಗಿದೆ ಅಂತ ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾಗೆ ಸಮನ್ಸ್​ ನೀಡಲಾಗಿದೆ. ಫಿರೋಜ್ ನಾಡಿಯದ್​ವಾಲಾ ಅವರು ಬಾಲಿವುಡ್​ನ ‘ಹೇರಾ ಫೇರಿ-3’, ‘ಫಿರ್ ಹೇರಾ ಫೇರಿ’, ‘ವೆಲ್​ಕಮ್​’, ‘ವೆಲ್​ಕಮ್ ಬ್ಯಾಕ್​’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಮತ್ತೊಂದು ಕಡೆ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ಗೆ ಮಂಗಳವಾರ (ನವೆಂಬರ್ 10) ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.

-masthmagaa.com

Contact Us for Advertisement

Leave a Reply