ಪಾಕಿಸ್ತಾನದಲ್ಲಿ ಗಂಗಾರಾಮ್ ಸಮಾಧಿ 10 ವರ್ಷಗಳ ಬಳಿಕ ಓಪನ್!

masthmagaa.com:

ಪ್ರಸಿದ್ಧ ಹಿಂದೂ ಸಮಾಜ ಸೇವಕ ಮತ್ತು ಖ್ಯಾತ ವಾಸ್ತುಶಿಲ್ಪಿ ಶ್ರೀ ಗಂಗಾರಾಮ್ ಅವರ ಸಮಾಧಿ ಸ್ಥಳಕ್ಕೆ ಸಾರ್ವಜನಿಕರು ಪ್ರವೇಶಿಸಲು ಪಾಕ್ ಸರ್ಕಾರ ಅನುಮತಿ ನೀಡ್ತಾ ಇದೆ. ಲಾಹೋರ್​ನಲ್ಲಿರೋ ಈ ಸಮಾಧಿ ಸ್ಥಳವನ್ನು 10 ವರ್ಷಗಳ ಹಿಂದೆ ದುಷ್ಕರ್ಮಿಗಳು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ಇಲ್ಲಿಗೆ ಸಾರ್ವಜನಿಕರ ಎಂಟ್ರಿ ಬಂದ್ ಆಗಿತ್ತು. ಇದೀಗ ಸಮಾಧಿ ಸ್ಥಳವನ್ನು ಪುನಃ ವಶಕ್ಕೆ ಪಡೆದಿರೋ ಲಾಹೋರ್ ಆಡಳಿತ, ಈಗಾಗಲೇ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರೋ ಅಧಿಕಾರಿಗಳು, ತಿಂಗಳಾಂತ್ಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತೇವೆ. ಸಮಾಧಿ ಸ್ಥಳದಲ್ಲಿ ಗಂಗಾರಾಮ್ ಅವರ ಸೇವೆಯನ್ನು ಸ್ಮರಿಸೋ ಆರ್ಟ್ ಗ್ಯಾಲರಿಯನ್ನು ಕೂಡ ನಿರ್ಮಿಸಲಾಗುತ್ತೆ ಅಂತ ತಿಳಿಸಿದ್ದಾರೆ. ಅಂದಹಾಗೆ ಈ ಗಂಗಾರಾಮ್ 1851ರಲ್ಲಿ ಲಾಹೋರ್​ನಿಂದ 65 ಕಿಲೋಮೀಟರ್ ದೂರದಲ್ಲಿರೋ ಮಂಗತ್​​ವಾಲಾದಲ್ಲಿ ಜನಿಸಿದ್ರು. ವಾಸ್ತುಶಿಲ್ಪಿ ಮತ್ತು ಸಿವಿಲ್ ಎಂಜಿನಿಯರ್ ಆಗಿದ್ದ ಇವರು, ಲಾಹೋರ್ ನಗರ ರಚನೆಯಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸಿದ್ರು. ಇವತ್ತಿಗೂ ಲಾಹೋರ್​ನಲ್ಲಿರೋ ಹೈಕೋರ್ಟ್​, ಹಲವು ಕಾಲೇಜುಗಳು, ಲಾಹೋರ್ ಮ್ಯೂಸಿಯಂ ಸೇರಿದಂತೆ ಹಲವು ಕಟ್ಟಡಗಳನ್ನು ಡಿಸೈನ್ ಮಾಡಿದ್ರು. ಅಲ್ಲದೆ ಲಾಹೋರ್ ಆಸ್ಪತ್ರೆ ಕಟ್ಟಲು ಭೂಮಿಯನ್ನು ದಾನ ನೀಡಿದ್ರು. 76 ವರ್ಷದ ಇವರು 1927ರಲ್ಲಿ ಸಾವನ್ನಪ್ಪಿದ್ರು.

-masthmagaa.com

Contact Us for Advertisement

Leave a Reply