ಮೋದಿಗೆ ಬಹಿರಂಗ ಪತ್ರ..50 ಮಂದಿ ವಿರುದ್ದ ದೇಶದ್ರೋಹ ಕೇಸ್..!

ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದ 50 ಮಂದಿ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ. ಬಿಹಾರದ ಮುಜಫರನಗರದಲ್ಲಿ ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ. ಇವರಲ್ಲಿ ರಾಮಚಂದ್ರ ಗುಹಾ, ಮಣಿರತ್ನಮ್ ಮತ್ತು ಅಪರ್ಣ ಸೇನ್ ಕೂಡ ಸೇರಿದ್ದಾರೆ. ಇವರು ಗುಂಪುಹತ್ಯೆ ಬಗ್ಗೆ ಪ್ರಧಾನಿ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದರು.

ಬಹಿರಂಗ ಪತ್ರ ಸಂಬಂಧ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಎಫ್‍ಐಆರ್ ದಾಖಲಿಸುವಂತೆ ಆದೇಶಿಸಿದ್ದರು. ಹೀಗಾಗಿ ಈಗ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧೀರ್ ಕುಮಾರ್ ಓಜಾ, ಪತ್ರದಲ್ಲಿ ಸಹಿ ಹಾಕಿರುವ 50 ಮಂದಿಯ ಹೆಸರನ್ನು ನಾನು ಅರ್ಜಿಯಲ್ಲಿ ಉಲ್ಲೇಖಿಸಿದ್ದೇನೆ. ಅವರ ವಿರುದ್ಧ ದೇಶದ ಘನತೆಗೆ ಕಳಂಕ ತಂದ ಮತ್ತು ಪ್ರಧಾನಿಯವರ ಕಾರ್ಯವೈಖರಿಯನ್ನು ದುರ್ಬಲಗೊಳಿಸಲು ಯತ್ನದ ಜೊತೆಗೆ ಪ್ರತ್ಯೇಕತಾವಾದಿ ಪ್ರವೃತ್ತಿಗೆ ಬೆಂಬಲಿಸಿದ ಆರೋಪವಿದೆ ಎಂದಿದ್ದಾರೆ.

ಪತ್ರದಲ್ಲಿ ಸಹಿಹಾಕಿದ 50 ಮಂದಿಯಲ್ಲಿ ಸಿನಿಮಾ ನಟರು, ನಿರ್ದೇಶಕರು, ಲೇಖಕರು ಕೂಡ ಸೇರಿದ್ದಾರೆ. ಅಲ್ಲದೆ ಮುಸ್ಲಿಮರು, ದಲಿತರು ತಮ್ತು ಇತರೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.

Contact Us for Advertisement

Leave a Reply