VIDEO: ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ನಲ್ಲಿ ಭಾರಿ ಅಗ್ನಿ ಅನಾಹುತ!

masthmagaa.com:

ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮಂಜ್ರಿ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಸಿರಂ ಇನ್​ಸ್ಟಿಟ್ಯೂಟ್​ನ ಟರ್ಮಿನಲ್ ಗೇಟ್ 1ರಲ್ಲಿರುವ SEZ3 ಬಿಲ್ಡಿಂಗ್​ನ 4 ಮತ್ತು 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟಕದಲ್ಲಿ ಲಸಿಕೆ ಉತ್ಪಾದಿಸುತ್ತಿರಲಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಲಸಿಕೆ ಉತ್ಪಾದನೆಗೆ ತಯಾರಿ ನಡೆಸಲಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡ್ತಿವೆ. ಒಂದು NDRF ತಂಡವನ್ನ ಕೂಡ ಅಲ್ಲಿಗೆ ಕಳಿಸಿಕೊಡಲಾಗಿದೆ. ಆದ್ರೆ ಕೋವಿಶೀಲ್ಡ್ ಲಸಿಕೆ, ಲಸಿಕೆ ಸಂಗ್ರಹಾಗಾರ ಮತ್ತು ಲಸಿಕೆ ಉತ್ಪಾದನಾ ಘಟಕಕ್ಕೆ ಯಾವುದೇ ತೊಂದ್ರೆ ಆಗಿಲ್ಲ ಅಂತ ಪೊಲೀಸರು ಹೇಳಿದ್ದಾರೆ.

 

-masthmagaa.com

Contact Us for Advertisement

Leave a Reply