masthmagaa.com:

ಉತ್ತರಪ್ರದೇಶದಲ್ಲಿ ‘ಲವ್​ ಜಿಹಾದ್​’ ತಡೆ ಕಾನೂನು ಜಾರಿಗೆ ಬಂದ ಮರುದಿನವೇ ಮೊದಲ ಕೇಸ್ ದಾಖಲಾಗಿದೆ. ಕೇವಲ ಉತ್ತರಪ್ರದೇಶ ಮಾತ್ರವಲ್ಲ ದೇಶದಲ್ಲಿ ದಾಖಲಾದ ಮೊದಲ ಕೇಸ್ ಇದಾಗಿದೆ. ಯುವತಿಯನ್ನ ಬಲವಂತವಾಗಿ ಮತ್ತು ಹೆದರಿಸಿ ಬೆದರಿಸಿ ಮತಾಂತರ ಮಾಡಲು ಯತ್ನಿಸಿದ ಆರೋಪದಡಿ ಉಬೈಸ್​ ಎಂಬುವವನ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಉತ್ತರಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿಯು ಮನೆಯಿಂದ ಓಡಿ ಹೋಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಅಂದ್ಹಾಗೆ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ನಿನ್ನೆಯಷ್ಟೇ ರಾಜ್ಯಪಾಲೆ ಆನಂದಿ ಬೇನ್ ಪಟೇಲ್ ಸಹಿ ಹಾಕಿದ್ದರು. ಇದರ ಪೂರ್ತಿ ಹೆಸರು, ‘ಉತ್ತರಪ್ರದೇಶ ಪ್ರೊಹಿಬಿಷನ್ ಆಫ್ ಅನ್​ಲಾಫುಲ್​​ ಕನ್ವರ್ಷನ್​​ ಆಫ್ ರಿಲೀಜಿಯನ್ ಆರ್ಡಿನೆನ್ಸ್​​-2020’ ಅಂತ. ಇದರ ಪ್ರಕಾರ ಬಲವಂತವಾಗಿ ಮತಾಂತರ ಮಾಡಿದ್ರೆ 1ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಬಹುದು. ಅದೇ ಎಸ್​ಸಿ-ಎಸ್​​ಟಿ ಸಮುದಾಯದ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರನ್ನ ಮತಾಂತರ ಮಾಡಿದ್ರೆ 1ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಪರಸ್ಪರ ಒಪ್ಪಿಗೆಯಿಂದಲೇ ಮತಾಂತರವಾಗಿ ಮದುವೆಯಾಗುವುದಾದರೆ 2 ತಿಂಗಳು ಮೊದಲೇ ಜಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.

-masthmagaa.com

Contact Us for Advertisement

Leave a Reply