ಮತ್ತೊಂದು ಫೋಟೋ ತೆಗೆದ ಚಂದ್ರಯಾನ-2.. ಹೇಗಿದೆ ನೋಡಿ…

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇವತ್ತು ಪುನಃ ಒಂದು ಹೊಸ ಫೋಟೋ ಬಿಡುಗಡೆ ಮಾಡಿದೆ. ಚಂದ್ರಯಾನ್-2ನ ಐಐಆರ್​​ಎಸ್​ ಅಂದ್ರೆ ಇಸ್ರೋದ ರಿಮೋಟ್ ಸೆನ್ಸಿಂಗ್​ ಮೂಲಕ ತೆಗೆದ ಫೋಟೋ ಇದಾಗಿದೆ. ಐಐಆರ್​ಎಸ್​​ನ್ನು ಚಂದ್ರನ ಮೇಲೆ ಸೂರ್ಯನ ಬೆಳಕು ಎಷ್ಟಿದೆ ಎಂಬುದನ್ನೂ ಅಳತೆ ಮಾಡಲು ಸಾಧ್ಯವಾಗುವಂತೆ ಡಿಸೈನ್ ಮಾಡಲಾಗಿದೆ. ಜೊತೆಗೆ ಚಂದ್ರನ ಮೇಲೆ ಸೂರ್ಯನ ಮೇಲಿನ ಕಿರಣಗಳು ಮತ್ತು ಖನಿಜಗಳ ಬಗ್ಗೆಯೂ ಐಐಆರ್​ಎಸ್​ ಮಾಹಿತಿ ನೀಡಲಿದೆ. ಈಗ ಸಿಕ್ಕಿರೋ ಫೋಟೋದಿಂದ ಹಲವು ಮಹತ್ವದ ಅಂಶಗಳು ಬೆಳಕಿಗೆ ಬರಲಿವೆ. ಅಕ್ಟೋಬರ್ 4ರಂದು ಚಂದ್ರಯಾನ-2ನ ಆರ್ಬಿಟರ್ ಹೈ ರೆಸ್ಯೂಲೇಷನ್​​ ಮೂಲಕ ತೆಗೆದ ಫೋಟೋವನ್ನು ಇಸ್ರೋ ಬಿಡುಗಡೆಗೊಳಿಸಿತ್ತು. ಇದ್ರಲ್ಲಿ ಚಂದ್ರನ ಮೇಲಿನ ಗುಂಡಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು.

Contact Us for Advertisement

Leave a Reply