masthmagaa.com:

ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಆರೋಗ್ಯ ಖಾತೆಯನ್ನು ನಿರ್ವಹಿಸಲು ಮತ್ತು ಕೊರೋನಾ ನಿಯಂತ್ರಿಸಲು ವಿಫಲರಾಗಿದ್ದಕ್ಕೆ ರಾಮುಲುಗೆ ಸಮಾಜ ಕಲ್ಯಾಣ ಖಾತೆಯನ್ನ ನೀಡಲಾಗಿದೆ ಅಂತೆಲ್ಲಾ ಹೇಳಲಾಗುತ್ತಿದೆ. ಖಾತೆ ಬದಲಾವಣೆಯಿಂದ ರಾಮುಲು ಅಸಮಾಧಾನಗೊಂಡಿದ್ದಾರೆ ಅಂತ ವರದಿಯಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಆರೋಗ್ಯ ಸಚಿವರು ಮತ್ತು ಹಾಲಿ ಆರೋಗ್ಯ ಸಚಿವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀರಾಮುಲು ಮತ್ತು ಡಾ. ಕೆ. ಸುಧಾಕರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಧಾನ ನಡೆಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ರಾಮುಲು, ‘ಸುಧಾಕರ್ ವೈದ್ಯರಾಗಿರುವುದರಿಂದ ಅವರಿಗೆ ಆರೋಗ್ಯ ಖಾತೆಯನ್ನು ನೀಡಿದ್ದಾರೆ. ನಾನು ಸಂತೋಷದಿಂದ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ’ ಎಂದಿದ್ದಾರೆ. ಜೊತೆಗೆ ನಾನು ಆರೋಗ್ಯ ಸಚಿವನಾಗಿದ್ದಾಗ ಬೆಂಗಳೂರಿನಲ್ಲಿ ಸಾವಿರ ಕೊರೋನಾ ಪ್ರಕರಣ ಇತ್ತು. ಆದ್ರೆ ಸುಧಾಕರ್​ಗೆ ಬೆಂಗಳೂರು ಕೊರೋನಾ ಉಸ್ತುವಾರಿ ನೀಡಿದ ಬಳಿಕ ಸೋಂಕಿನ ಪ್ರಮಾಣ ಹೆಚ್ಚಾಯ್ತು. ಹಾಗಂತ ಸುಧಾಕರ್ ವಿಫಲರಾಗಿದ್ದಾರೆ ಅಂತ ಅಲ್ಲ ಎಂದು ಹೇಳಿದ್ದಾರೆ.

ಇನ್ನು ಡಾ.ಕೆ. ಸುಧಾಕರ್ ಮಾತನಾಡಿ, ‘ಶ್ರೀರಾಮುಲು ಅಣ್ಣ ಹಿರಿಯರು, ಒಳ್ಳೆಯವರು. ರಾಮುಲುಗೆ ಸಮಾಜ ಕಲ್ಯಾಣ ಖಾತೆ ನೀಡಿದ್ದಾರೆ. ಇದರರ್ಥ ಅವರು ಡಿಪ್ರಮೋಟ್ ಆಗಿದ್ದಾರೆ ಅಂತಲ್ಲ. ಅವರು ಪ್ರಮೋಟ್ ಆಗಿದ್ದಾರೆ. ಒಂದು ತಿಂಗಳ ಹಿಂದೆಯೇ ಸಚಿವ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದ್ರೆ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಆಗಿರಲಿಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply