ಅಮೆರಿಕದಿಂದ ಭಾರತಕ್ಕೆ ಬರ್ತಿದೆ ಸಹಾಯದ ಮೊದಲ ಪಾರ್ಸೆಲ್

masthmagaa.com:

ಭಾರತದಲ್ಲಿ ಕೊರೋನಾ ಹಾವಳಿ ಹೆಚ್ಚಾದ ಬೆನ್ನಲ್ಲೇ ಹಲವು ದೇಶಗಳು ಭಾರತದ ನೆರವಿಗೆ ಬಂದಿವೆ. ಈ ಪೈಕಿ ಅಮೆರಿಕ 100 ಮಿಲಿಯನ್ ಡಾಲರ್​ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನ ಮುಂದಿನ ದಿನಗಳಲ್ಲಿ ಭಾರತಕ್ಕೆ ಕಳಿಸುತ್ತೆ ಅಂತ ವೈಟ್​ಹೌಸ್ ಹೇಳಿದೆ. 100 ಮಿಲಿಯನ್ ಡಾಲರ್ ಅಂದ್ರೆ ಸುಮಾರು 750 ಕೋಟಿ ರೂಪಾಯಿ ಆಗುತ್ತೆ. ವೈದ್ಯಕೀಯ ಸಾಮಗ್ರಿಗಳನ್ನ ಹೊತ್ತ ಅಮೆರಿಕದ ರಕ್ಷಣಾ ಇಲಾಖೆಯ ಮೊದಲ ವಿಮಾನ ಇವತ್ತು ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ. ಇದರಲ್ಲಿ 440 ಆಕ್ಸಿಜನ್ ಸಿಲಿಂಡರ್ ಮತ್ತು ರೆಗ್ಯುಲೇಟರ್​ಗಳು ಬರಲಿವೆ. ಜೊತೆಗೆ ಕೊರೋನಾವನ್ನ ಫಾಸ್ಟಾಗಿ ಪತ್ತೆಹಚ್ಚಿ, ಸಮುದಾಯ ಮಟ್ಟದಲ್ಲಿ ಹರಡದಂತೆ ತಡೆಯಲು 9.60 ಲಕ್ಷ ರ್ಯಾಪಿಡ್ ಡಯಾಗ್ನೋಸ್ಟಿಕ್​ ಟೆಸ್ಟ್​ ಕಿಟ್​ಗಳನ್ನ ಮತ್ತು 1 ಲಕ್ಷ ಎನ್​-95 ಮಾಸ್ಕ್​ಗಳನ್ನ ಕಳಿಸುತ್ತಿದ್ದೇವೆ ಅಂತ ವೈಟ್​ ಹೌಸ್​ ಹೇಳಿದೆ. ಹೀಗೆ ಮುಂದಿನ ವಾರದವರೆಗೆ ಆಕ್ಸಿಜನ್ ಸಪೋರ್ಟ್​, ಆಕ್ಸಿಜನ್​ ಕನ್ಸನ್​ಟ್ರೇಟರ್ಸ್​, ಆಕ್ಸಿಜನ್​ ಜನರೇಷನ್ ಯೂನಿಟ್ಸ್, ಪಿಪಿಇ ಕಿಟ್​ಗಳು, ಲಸಿಕೆ ಉತ್ಪಾದನೆಗೆ ಬೇಕಾದ ವಸ್ತುಗಳು, ರ್ಯಾಪಿಡ್​ ಡಯಾಗ್ನೋಸ್ಟಿಕ್​​ ಟೆಸ್ಟ್​ ಕಿಟ್​ ಮುಂತಾದವುಗಳು ಅಮೆರಿಕದಿಂದ ಭಾರತಕ್ಕೆ ಬರಲಿವೆ.

-masthmagaa.com

Contact Us for Advertisement

Leave a Reply