ಶೋಕಿವಾಲನ ಮೊದಲನೇ ಹಾಡು ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆ!

masthmagaa.com:

ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟಿಸಿರುವ ಶೋಕಿವಾಲ ಚಿತ್ರದ ಮೊದಲನೇ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಆಗಸ್ಟ್ 20th ರಂದು ಬಿಡುಗಡಯಾಗುತ್ತಿದೆ.

ಮೊದಲ ಬಾರಿಗೆ ಕನ್ನಡದಲ್ಲಿ ಅನ್ವೇಷ ಹಾಡನ್ನು ಹಾಡಿರುವುದು ವಿಶೇಷವಾಗಿದೆ. ಜಯಂತ್ ಕಾಯ್ಕಿಣಿ ರವರು ಬರೆದಿರುವ ಹಾಡನ್ನು ಹಿಂದಿ ಸಿನಿಮಾ “ಪ್ರೇಮ್ ರತನ್ ದನ್ ಪಾಯೋ” ಸಿನಿಮಾದ ಸಿಂಗರ್ “ಅನ್ವೇಷ” ನಮ್ಮ ಚಿತ್ರಕ್ಕೆ ಹಾಡಿರುವುದು ತುಂಬಾ ಖುಷಿಯಾಗಿದೆ. ಇದೆ ಹಾಡನ್ನು ತೆಲುಗಿಗೆ ಕನ್ನಡದ ಸಿಂಗರ್ ಆದ ಶ್ವೇತ ದೇವನಹಳ್ಳಿ ಯವರು ಹಾಡಿದ್ದಾರೆ… ಕನ್ನಡ ಮತ್ತು ತೆಲುಗು ಮೇಲ್ ವರ್ಷನ್ ಅನ್ನ ಸಂತೋಷ್ ವೆಂಕಿ ಹಾಡಿದ್ದಾರೆ, ಕನ್ನಡದ ಪ್ರತಿಭೆಗಳಿಗೆ ಬೇರೆ ಭಾಷೆಯ ಹಾಡನ್ನು ಹಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ. ಈ ತೆಲುಗಿನ ಹಾಡನ್ನು ಗೌಸ್ಪಿರ್ ರವರು ಬರೆದಿದ್ದು ತುಂಬಾ ಚೆನ್ನಾಗಿ ಬಂದಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಂದಿನ ಹಾಡುಗಳ ಬಗ್ಗೆ ಮಾಹಿತಿ ನೀಡುತ್ತಾ ಬರುತ್ತೆವೆ ಎಂದು ನಿರ್ಮಾಪಕ ಡಾ” T.R.ಚಂದ್ರಶೇಖರ್ ಹಾಗೂ ನಿರ್ದೇಶಕ ಜಾಕಿ ತಿಳಿಸಿದ್ದಾರೆ. ಆಗಷ್ಟ್ 20 ಕ್ಕೆ ಮೊದಲ ಹಾಡಿನ ಲೀರಿಕಲ್ ವೀಡಿಯೋ ಬಿಡುವುದಾಗಿ ತಿಳಿಸಿದ್ದಾರೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಮೋಡಿ ಮಾಡಲಿರುವ ಮೇಲೋಡಿ ಸಾಂಗ್ ಇದಾಗಿದೆ. ಈ ಹಾಡನ್ನು ಕ್ರಿಸ್ಟಲ್ ಮ್ಯೂಸಿಕ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

-masthmagaa.com

Contact Us for Advertisement

Leave a Reply