ಅಮೆರಿಕಾದಲ್ಲಿ ಭಾರತ ಮೂಲದ ಪೊಲೀಸ್ ಕಗ್ಗೊಲೆ

ಅಮೆರಿಕಾದಲ್ಲಿ ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ಅಮೆರಿಕಾದ ಸಿಖ್ ಪೊಲೀಸ್ ಅಧಿಕಾರಿಯಾಗಿದ್ದ ಇವರನ್ನು ಕಾರಿನಲ್ಲಿ ಬಂದ ದುಷ್ಟರು ಹತ್ಯೆಗೈದಿದ್ದಾರೆ. ಟೆಕ್ಸಾಸ್‍ನ ಹ್ಯಾರಿಸ್ ಪ್ರಾಂತ್ಯದ ಪೊಲೀಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್ ಧಲಿವಲ್ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ನಿನ್ನೆ ಟ್ರಾಫಿಕ್ ಸಿಗ್ನಲ್‍ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕಾರೊಂದನ್ನು ತಡೆದಿದ್ದಾರೆ. ಆದ್ರೆ ಕಾರೊಳಗೆ ಓರ್ವ ವ್ಯಕ್ತಿ ಮತ್ತು ಮಹಿಳೆ ಇದ್ದರು. ಅವರಲ್ಲಿ ಒಬ್ಬರು ಕಾರಿನಿಂದ ಇಳಿದು ಹಲವಾರು ಬಾರಿ ಸಂದೀಪ್ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 47 ವರ್ಷದ ರಾಬರ್ಟ್ ಸೋಲಿಸ್ ಎಂದು ಗುರುತಿಸಲಾಗಿದ್ದು, ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಪೊಲೀಸ್ ಅಧಿಕಾರಿ ಸಂದೀಪ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

Contact Us for Advertisement

Leave a Reply