ಸೌದಿಯಲ್ಲಿ ಇನ್ಮುಂದೆ ಟೈಟ್ ಬಟ್ಟೆ ಹಾಕಿದ್ರೆ ದಂಡ..!

ಸೌದಿಯಲ್ಲಿ ಇದೇ ಮೊದಲ ಬಾರಿಗೆ 49 ದೇಶಗಳ ಮೇಲಿನ ಪ್ರವಾಸಿ ವೀಸಾ ಮೇಲಿನ ನಿರ್ಬಂಧವನ್ನು ತೆಗೆದುಹಾಕಿ ಎಲ್ಲರಿಗೂ ಅವಕಾಶ ನೀಡಲಾಗಿದೆ. ಆದ್ರೆ ಅದ್ರ ಜೊತೆಗೆ ಮತ್ತೊಂದು ಹೊಸ ಕಾನೂನು ರೂಪಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತನ್ನು ಕಾಪಾಡದಿದ್ದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಟೈಟಾಗಿ ಡ್ರೆಸ್ ಮಾಡ್ಕೊಂಡು ಹೋಗೋದು, ಕಿಸ್ ಕೊಟ್ಕೊಳ್ಳೋದೆಲ್ಲಾ ಮಾಡಿದ್ರೆ ದುಬಾರಿ ದಂಡ ಕಟ್ಟಬೇಕಾಗುತ್ತೆ ಎಂದು ಎಚ್ಚರಿಸಿದೆ. ಇವೆರಡೇ ಅಲ್ಲ, ಇದೇ ರೀತಿಯ ಒಟ್ಟು 10 ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿಷೇಧಿಸಲಾಗಿದ್ದು, ಯಾವುದಕ್ಕೆ ಎಷ್ಟು ದಂಡ ಅಂತ ಇನ್ನೂ ಸ್ಪಷ್ಟಪಡಿಸಿಲ್ಲ. ಈ ನಿಯಮ ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಅನ್ವಯವಾಗಲಿದೆ. ಮಹಿಳೆಯರು ಯಾವ ಬಟ್ಟೆ ಬೇಕಾದರೂ ಧರಿಸಬಹುದು. ಆದ್ರೆ ಅಶ್ಲೀಲವಾಗಿರಬಾರದು ಎಂದು ತಿಳಿಸಲಾಗಿದೆ.

Contact Us for Advertisement

Leave a Reply